ಅಂಡಿಂಜೆ ಗ್ರಾಪಂ ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

ಬೆಳ್ತಂಗಡಿ, ಜೂ.17: ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತ್ನ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾ ವಿಜೇತರಾಗಿದ್ದಾರೆ.
ಆಶಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಹಾಗೂ ಸಿಪಿಎಂ ಬೆಂಬಲಿತ ಅಭ್ಯರ್ಥಿ ಜಯಂತಿ ವಿರುದ್ಧ 21 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಯಂತಿ ಅವರು 28 ಮತಗಳನ್ನು ಗಳಿಸಿದ್ದರು.
ಒಟ್ಟು 68 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಒಂದು ಮತ ತಿರಸ್ಕೃತಗೊಂಡಿದೆ.
Next Story