ಆಳ್ವಾಸ್: 28 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

ಮೂಡುಬಿದಿರೆ, ಜೂ. 17: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿ ಪ್ರವೇಶಾತಿಗಾಗಿ ನಡೆದ ಜೆಇಇ ಅಡ್ವಾನ್ಸ್ಡ್ 28 ಪರೀಕ್ಷೆಯ ಪರಿಷ್ಕತ ಪಲಿತಾಂಶದಲ್ಲಿ ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸಾಮಾನ್ಯ ವಿಭಾಗದಲ್ಲಿ, ಶಶಾಂಕ್ ಡಿ (4061), ಸಚಿನ್ ಕುಮಾರ್ (9827), ಯಶಸ್ ಎಸ್ ವಿ (10497), ಮಹೇಶ್ ಕೊಪ್ಪದ್ (15511) , ಶ್ರೀ ವೈಷ್ಣವಿ ಆರ್ (19186) ಮತ್ತು ಗಮನ್ ಜೈನ್ (23158) ರ್ಯಾಂಕ್ ಪಡೆದಿರುತ್ತಾರೆ.
ಕೆಟಗರಿ ವಿಭಾಗದಲ್ಲಿ ಸುದರ್ಶನ್ ಜಿ ಎಸ್ (121) , ಹರೀಶ್ ಡಿ ಜಿ (165), ಶಶಾಂಕ್ (617), ಸಚಿನ್ ಪಿ ಲಮಾಣಿ (621), ವಂಶಿತೇಜ ಎನ್ (786) , ನೇತ್ರೇಶ್ ಎಮ್ ಆರ್ (851), ರಾಘವೇಂದ್ರ ಜೆ ಪಿ (1357) , ದರ್ಶನ್ (1363), ಗೌತಮಬುದ್ಧ (1430 ಸಚಿನ್ (1850), ಮನೋಜ್ (1974), ಯಶಸ್ (2031), ಚಂದನ್ (2866), ಮಹೇಶ್ (3267), ಗಮನ್ (5373) ಮಿಥುನ್ ಕಂಪಾಲಿ (5751) ಮತ್ತು ನಿಧಿ ವಿ (6345) ರ್ಯಾಂಕ್ ಪಡೆದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ.





