ಬೆಳ್ತಂಗಡಿ : ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ

ಬೆಳ್ತಂಗಡಿ,ಜೂ.18: ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವೊಂದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ವಿದ್ಯಮಾನ ಸವಣಾಲಿನಲ್ಲಿ ನಡೆದಿದೆ.
ಇಲ್ಲಿನ ಅಯಿಲಹಡಿಮೆ ಎಂಬಲ್ಲಿ ರಸ್ತೆ ಪಕ್ಕದಲ್ಲಿನ ಬೇಲಿಯೊಂದಕ್ಕೆ ಕಾಳಿಂಗವು ಸಿಕ್ಕಿಹಾಕಿಕೊಂಡಿತ್ತು. ಸುಮಾರು 13 ಅಡಿ ಉದ್ದದ ಸರ್ಪವು ಬೇಲಿಯಿಂದ ಹೊರಬರಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಯರು ಉಜಿರೆಯ ಸ್ನೇಕ್‍ಜೋಯ್ ಅವರಿಗೆ ವಿಷಯ ಮುಟ್ಟಿಸಿದರು. ತಕ್ಷಣ ಬಂದ ಅವರು ಅದನ್ನು ತನ್ನದೇ ಆದರೀತಿಯಲ್ಲಿ ಹಿಡಿದು ರಕ್ಷಿಸಿ, ಚೀಲದಲ್ಲಿ ತುಂಬಿಸಿ ಚಾರ್ಮಾಡಿ ಕಣಿವೆಯ ಅರಣ್ಯದಲ್ಲಿ ಬಿಟ್ಟರು. ಸ್ನೇಕ್‍ಜೋಯ್ ಅವರ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.
Next Story





