ತರೀಕೆರೆ: ಕಲುಷಿತ ನೀರು ಸೇವಿಸಿ 60 ಮಂದಿ ಅಸ್ವಸ್ಥ

ಚಿಕ್ಕಮಗಳೂರು, ಜೂ.18: ಕಲುಷಿತ ನೀರು ಸೇವನೆಯಿಂದ 60 ಮಂದಿ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ವರದಿಯಾಗಿದೆ.
ತಾಲೂಕಿನ ಕರಕುಚ್ಚಿ ಗ್ರಾಮದ ಲಂಬಾಣಿ ಸಮುದಾಯದವರು ವಾಸವಿರುವ ಕರಕುಚ್ಚಿ ತಾಂಡದ ಸುಮಾರು 60 ನಿವಾಸಿಗಳು ಕಳೆದ ಒಂದು ವಾರದ ಹಿಂದೆ ನೀರಿನ ಟ್ಯಾಂಕರ್ ಮೂಲಕ ಪೂರೈಸಿದ್ದ ನೀರು ಕುಡಿದು ಅಸ್ವಸ್ಥರಾಗಿರಬಹುದೆಂದು ಕರಕುಚ್ಚಿ ಗ್ರಾಪಂ ಪಿಡಿಒ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಸುಮಾರು 60 ಜನರು ತೀವ್ರವಾಗಿ ಅಸ್ವಸ್ಥರಾಗಿದ್ದು, ಅಸ್ವಸ್ಥರಾದವರು ರವಿವಾರ ರಾತ್ರಿಯಿಂದ ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದೆ. ಅಸ್ವಸ್ಥರನ್ನು ತರೀಕೆರೆ ಹಾಗೂ ಲಕ್ಕವಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರವಾಗಿ ಅಸ್ವಸ್ಥರಾದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸ್ವಸ್ಥರ ಚಿಕಿತ್ಸೆಗೆ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ.
Next Story





