ಉಪ ನಿರ್ದೇಶಕರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಜೂ.18: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಕೆಲವೊಂದು ಉಪನಿರ್ದೇಶಕರ ಹುದ್ದೆಗಳು ಮೀಸಲಿದ್ದು, ಈ ಪೈಕಿ ನಾಲ್ಕು ಹುದ್ದೆಗಳು ಪರಿಶಿಷ್ಟ ಜಾತಿ ಹಾಗೂ ಒಂದು ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಈ ಹುದ್ದೆಗೆ ಸಶಸ್ತ್ರ ಪಡೆಗಳಿಂದ ಬಿಡುಗಡೆ/ ನಿವೃತ್ತಿಹೊಂದಿದ ಲೆಪ್ಟನೆಂಟ್ ಕರ್ನಲ್/ ಮೇಜರ್ ಹಾಗೂ ತತ್ಸಮಾನ ರ್ಯಾಂಕಿಂಗ್ ವಾಯುಸೇನಾ ಮತ್ತು ನೌಕಾಸೇನಾ ಕಮಿಷನ್ಡ್ ಅಧಿಕಾರಿಗಳು ಅರ್ಹರಿರುವರು. ಆಸಕ್ತ ಅ್ಯರ್ಥಿಗಳು ಜೂ.20ರೊಳಗೆ ತಮ್ಮ ಬಯೋಡೇಟಾವನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ಇವರಿಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Next Story





