ಮಂಗಳೂರು ಪೊಲೀಸ್ ಆಯುಕ್ತರಾಗಿ ಮರು ನಿಯೋಜನೆಗೊಂಡ ಟಿ.ಆರ್.ಸುರೇಶ್ ಅಧಿಕಾರ ಸ್ವೀಕಾರ
ಮಂಗಳೂರು, ಜೂ.18: ಮಂಗಳೂರು ಪೊಲೀಸ್ ಆಯುಕ್ತರಾಗಿ ಪುನರ್ ನಿಯೋಜನೆಗೊಂಡ ಟಿ.ಆರ್.ಸುರೇಶ್ ಕುಮಾರ್ ಹಾಲಿ ಆಯುಕ್ತ ವಿಫುಲ್ ಕುಮಾರ್‌ರವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
ಪೊಲೀಸ್ ಆಯುಕ್ತರಾದ ವಿಫುಲ್ ಕುಮಾರ್ ಮೈಸೂರಿನ ಪೊಲೀಸ್ ತರಬೇತಿ ಅಕಾಡೆಮಿಯ ಹಿರಿಯ ಪೊಲೀಸ್ ಅಧಿಕಾರಿಯಾಗಿ ಮರು ನಿಯೋಜನೆಗೊಂಡಿ ದ್ದಾರೆ.
ಕಾನೂನು ಸುವ್ಯವಸ್ಥೆ ಯೊಂದಿಗೆ ಕೆಲಸ ಮುಂದುವರಿಯಲಿದೆ:- ನಗರದಲ್ಲಿ ಎರಡು ತಿಂಗಳ ಕಾಲ ವಿಪುಲ್ ಕುಮಾರ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆ ಯಾಗದಂತೆ ಮುಂದೆಯೂ ಕಾರ್ಯ ನಿರ್ವಹಿಸಲು ಜನರು ಸಹಕಾರ ನೇಡಬೇಕೆಂದು ನೂತನ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಮಂಗಳೂರಿನ ಹೆಚ್ಚಿನ ಜನರು ಕಾನೂನಿಗೆ ಗೌರವ ನೀಡುವವರು ಶಾಂತಿ ಪ್ರೀಯರು ಎನ್ನುವುದು ನನಗೆ ಮನವರಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಿದ್ದಾರೆ. ಮಂಗಳೂರಿಗೆ ಬರುವ ಮೊದಲು ಇಲ್ಲಿ ಕೋಮು ಸಮಸ್ಯೆ ಗರಿಷ್ಠವಾಗಿದೆ ಎನ್ನುವ ವದಂತಿಗಳಿತ್ತು ಆದರೆ ಇಲ್ಲಿನ ಹೆಚ್ಚಿನ ಜನರು ಶಾಂತಿ ಪ್ರೀಯರು ಸೌರ್ಹಾದತೆಯನ್ನು ಬಯಸುವವರು. ಬೆರಳೆಣಿಕೆಯ ಕೆಲವು ಕ್ರಿಮಿನಲ್‌ಗಳಿಂದ ಕೆಲವೊಮ್ಮೆ ಸಮಸ್ಯೆಗಳಾಗುತ್ತಿವೆ ಎನ್ನುವುದು ಮನವರಿಕೆಯಾಗಿದೆ. ಹೆಚ್ಚಿನ ಸುಶಿಕ್ಷಿತ ಜನರಿರುವ ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವುದು ಖುಷಿ ನೀಡಿದೆ ಎಂದು ನಿರ್ಗಮನ ಆಯುಕ್ತ ವಿಫುಲ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.







