ಮೂಡುಬಿದಿರೆ: ನಾಟಾದಲ್ಲಿ ಆಳ್ವಾಸ್‍ನ 326 ಮಂದಿ ತೇರ್ಗಡೆ

ಮೂಡುಬಿದಿರೆ, ಜೂ. 18: ನಾಟಾ( ನ್ಯಾಶನಲ್ ಅಪ್ಟಿಡ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ರಾಷ್ಟ್ರೀಯ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ 326 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾಟಾ ರಾಜ್ಯ ರ್ಯಾಂಕ್ ಪ್ರಕಟಗೊಂಡಿದ್ದು ವೈಷ್ಣವಿ ನಾಯಕ್ 2ನೇ ಹಾಗೂ ಶಶಾಂಕ್ ಡಿ. 5ನೇ ರ್ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಅಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿಧಿ ಜಿ.ಎ(11ನೇ ರ್ಯಾಂಕ್), ವೇಣುಗೋಪಾಲ ಕೆ.ಆರ್ (29), ಅಖಿಲ್ ಎಸ್.ಆರ್(46), ನೇಹಾ ಕಿಣಿ(50), ವರ್ಷಿಣಿ ಕೆ.ಎಸ್(54), ತೇಜಸ್ವಿನಿ ಕೆ.ಎಸ್( 57), ಅಯಿನಾ ಸಮನ್(66), ಚಂದನಾ ಆರ್. (68), ಅಕ್ಷಯ್ ಕುಮಾರ್ ಯು.(76), ಶುಭಾ ಟಿ.ರೆಡ್ಡಿ(80), ಚಂದನಾ ಪಿ. (83), ವರಿಧಿ ಬಿ.ಎಸ್(87), ನವನೀತ್ ಪಿ.(88) ಹಾಗೂ ಸೌಂದರ್ಯ ಎಚ್.ಕೆ (91) ರ್ಯಾಂಕ್ ಪಡೆದ ವಿದ್ಯಾರ್ಥಿಗಳು.
100 ರ್ಯಾಂಕ್ ಒಳಗಡೆ 16 ಮಂದಿ, 200 ಒಳಗಡೆ 18 ಮಂದಿ, 500 ಒಳಗಡೆ 54 ಮಂದಿ, 1000 ಒಳಗಡೆ 92, 2000 ರ್ಯಾಂಕ್ ಒಳಗಡೆ 134 ಮಂದಿ ಹಾಗೂ 2000 ರ್ಯಾಂಕ್ ಮೇಲ್ಪಟ್ಟು 12 ಮಂದಿ ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ. ಆಳ್ವಾಸ್‍ನಲ್ಲಿ 348 ಮಂದಿ ಪರೀಕ್ಷೆ ಬರೆದಿದ್ದಾರೆ. ಐಐಟಿ ಕೋಚಿಂಗ್ ವಿಭಾಗದ ಮುಖ್ಯಸ್ಥ ಗಣನಾಥ ಶೆಟ್ಟಿ, ಅಶ್ವತ್ಥ್ ಎಸ್.ಎಲ್, ಬೆಂಗಳೂರಿನ ಚಂದ್ರಶೇಖರ್, ಕಾವ್ಯ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ದೇಶದಲ್ಲಿ 44,265 ಮಂದಿ ಪರೀಕ್ಷೆ ಬರೆದಿದ್ದು, 30,560 ಮಂದಿ ತೇರ್ಗಡೆಯಾಗಿದ್ದರೆ. ರಾಜ್ಯದಲ್ಲಿ ಕೆಸಿಇಟಿಯಲ್ಲಿ 2,669 ಆರ್ಕಿಟೆಕ್ಚರ್ ಸೀಟು ಲಭ್ಯವಿದ್ದು 2160 ರ್ಯಾಂಕ್ ಪ್ರಕಟಗೊಂಡಿದ್ದಾರೆ ಎಂದು ಡಾ.ಮೋಹನ ಆಳ್ವ ತಿಳಿಸಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಆಳ್ವಾಸ್ ಸಂಸ್ಥೆಯ ಪಿಆರ್‍ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







