ಕಡೇಶ್ವಾಲ್ಯ ಗ್ರಾಪಂ ಸದಸ್ಯ ಸಹಿತ ಇಬ್ಬರಿಗೆ ತಂಡದಿಂದ ಹಲ್ಲೆ
ಬಂಟ್ವಾಳ, ಜೂ. ೧೮: ಕಡೇಶ್ವಾಲ್ಯ ಗ್ರಾಪಂ ಸದಸ್ಯ ಸಹಿತ ಇಬ್ಬರ ಮೇಲೆ ತಂಡವೊಂದು ಹಲ್ಲೆಗೈದ ಘಟನೆ ಅಮೈ ಎಂಬಲ್ಲಿ ಸೋಮವಾರ ನಡೆದಿದೆ.
ಕಡೇಶ್ವಾಲ್ಯ ಗ್ರಾಪಂ ಸದಸ್ಯ ಸನತ್ ಕುಮಾರ್ ಆಳ್ವ ಹಾಗೂ ಸಾತ್ವಿಕ್ ಎಂಬವರಿಗೆ ಪರ್ನೆ ಪರಿಸರದ ಪರಿಚಯಸ್ಥ ಐದಾರು ಮಂದಿ ಯುವಕರ ತಂಡ ಹಲ್ಲೆಗೈದಿದೆ.
ಗಾಯಾಳುಗಳಿಬ್ಬರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ನಿಂತಿದ್ದ ಆಟೊರಿಕ್ಷಾ ಚಾಲಕರನ್ನು ವಿಚಾರಿಸುತ್ತಿದ್ದ ಸನತ್ ಹಾಗೂ ಸಾತ್ವಕ್ ಅವರಿಗೆ ಪರಿಚಯಸ್ಥ ಯುವಕರು ಏಕಾಏಕಿಯಾಗಿ ಮುಗಿಬಿದ್ದು, ಇದನ್ನು ಕೇಳಲು ನಿವ್ಯಾರು ಎಂದು ಪ್ರಶ್ನಿಸಿದಲ್ಲದೆ ಅವಾಚ್ಯವಾಗಿ ನಿಂದಿಸಿ, ದೊಣ್ಣೆಯಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಶಾಸಕ ಭೇಟಿ: ಘಟನೆಯ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ದೇವದಾಸ ಶೆಟ್ಟಿ, ಉದಯ
ಕುಮಾರ್ ರಾವ್ ಬಂಟ್ವಾಳ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು ಮತ್ತಿತರರಿದ್ದರು.







