ಉಳ್ಳಾಲ: ಅಬ್ಬಕ್ಕ ಉತ್ಸವ ಸಮಿತಿಯಿಂದ ಸಚಿವ ಯು.ಟಿ. ಖಾದರ್‌ಗೆ ಸನ್ಮಾನ

ಉಳ್ಳಾಲ, ಜೂ. 18: ರಾಜ್ಯದ ನೂತನ ಸಮ್ಮಿಶ್ರ ಸರಕಾರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ಆವರನ್ನು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪರವಾಗಿ ಗೌರವಿಸಲಾಯಿತು.
ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದನಾಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಸುವಾಸಿನಿ ಜೆ. ಬಬ್ಬುಕಟ್ಟೆ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಕಾರ್ಯದರ್ಶಿಗಳಾದ ಡಿ.ಎನ್. ರಾಘವ, ಕೆ.ಎಮ್.ಕೆ. ಮಂಜನಾಡಿ, ವಾಸುದೇವ ರಾವ್, ಸತೀಶ್ ಭಂಡಾರಿ, ರತ್ನಾವತಿ ಜೆ. ಬೈಕಾಡಿ, ಮಲ್ಲಿಕಾ ಭಂಡಾರಿ, ಅನುಪಮ ಸಿ. ಬಬ್ಬುಕಟ್ಟೆ, ವಾಣಿ ಲೋಕಯ್ಯ, ಸರೋಜಾ ಕುಮಾರಿ ಹಾಗೂ ಲೀಲಾವತಿ ಉಪಸ್ಧಿತರಿದ್ದರು.
Next Story





