ಪಣಂಬೂರು ಬೀಚ್‌ನಲ್ಲಿ ಸುಂಟರಗಾಳಿ !

ಮಂಗಳೂರು, ಜೂ. 18: ಪಣಂಬೂರು ಸಮುದ್ರ ತೀರದಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಇದು ಕೆಲವು ಮೊಬೈಲ್‌ಗಳಲ್ಲಿ ಸೆರೆಯಾಗಿವೆ.
ಸಮುದ್ರ ತೀರದಲ್ಲಿ ಗಾಳಿ ಹೊಸತಲ್ಲ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿರುತ್ತದೆ. ಆದರೆ, ಸಮುದ್ರ ಬಳಿ ಇದ್ದ ಕೆಲವರಿಗೆ ಸೋಮವಾರ ಬೀಸಿದ ಗಾಳಿಯ ವೇಗವು ಅಚ್ಚರಿಯನ್ನು ಮೂಡಿಸಿದೆ. ಸಮುದ್ರದಲ್ಲಿ ಕಾಣಿಸಿಕೊಂಡ ಗಾಳಿಯು ವೇಗವನ್ನು ಹೆಚ್ಚಿಸುತ್ತಾ ಭೂಮಿಯನ್ನು ಅಪ್ಪಳಿಸಿದೆ. ಆದರೆ ಕ್ಷಣಾರ್ಧದಲ್ಲೇ ಗಾಳಿಯು ತನ್ನ ವೇಗವನ್ನು ಕ್ಷೀಣಿಸಿಕೊಂಡಿತು ಎಂದು ಎಂದು ಸ್ಥಳೀಯರು ಹೇಳುತ್ತಾರೆ.
ಅಪರೂಪದ ಈ ಸುಂಟರಗಾಳಿಯನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಯಾಗಿಸಿದ್ದಾರೆ.
Next Story





