ಯಲ್ಲಾಪುರ: ಕಾರು ಢಿಕ್ಕಿ ಹೊಡೆದು ಮಹಿಳೆ ಗಂಭೀರ

ಯಲ್ಲಾಪುರ,ಜೂ.18: ಮಹಿಳೆಯೋರ್ವಳ ಕಾಲುಗಳ ಮೇಲೆ ಕಾರು ಚಲಿಸಿದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.
ಗಾಯಗೊಂಡಿರುವ ಮಹಿಳೆಯನ್ನು ಅಂಕೋಲಾ ನಿವಾಸಿ ಮೋಹಿನಿ ಅಂಕೋಲೆಕರ(55) ಎಂದು ಹೇಳಲಾಗಿದೆ. ಗಾಯಗೊಂಡಿರುವ ಮಹಿಳೆ ತಾಲೂಕು ಆಸ್ಪತ್ರೆಯ ವೈದ್ಯರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಸಂತೆಗೆ ಸಾಮಾನು ತರಲು ಸಂಜೆ ಮಾರುಕಟ್ಟೆಗೆ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
Next Story





