ಕೊಪ್ಪ: ವಿವಾಹಿತ ಮಹಿಳೆ ನಾಪತ್ತೆ
ಕೊಪ್ಪ, ಜೂ.18: ತಾಲೂಕಿನ ತಮ್ಮಡವಳ್ಳಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಪತಿ ಮಂಜುನಾಥ್ ಶನಿವಾರ ಹರಿಹರಪುರ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ 40 ವರ್ಷ ಪ್ರಾಯದ ತನ್ನ ಪತ್ನಿ ವಸಂತಿ ಮೇ 18ರಂದು ದಾಸನಕೊಡಿಗೆಯಲ್ಲಿರುವ ಮಗನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಈವರೆಗೂ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಮಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಬೆಂಗಳೂರಿನಲ್ಲಿ ಇನ್ನೊಬ್ಬ ದಾಸನಕೊಡಿಗೆಯಲ್ಲಿ ವಾಸವಾಗಿದ್ದಾರೆ. ಪತ್ನಿ ವಸಂತಿ ಆಗಾಗ್ಗೆ ಮನೆ ಬಿಟ್ಟು ಹೋಗಿ ಒಂದೆರಡು ದಿನ ಬಿಟ್ಟು ವಾಪಸ್ ಮನೆಗೆ ಬರುತ್ತಿದ್ದಳು. ಅಲ್ಲದೇ ಆಕೆಗೆ ಮದ್ಯಪಾನ ಮಾಡುವ ಅಭ್ಯಾಸವೂ ಇದೆ. ಈ ಬಾರಿ ಹೋದವಳು ವಾಪಸ್ಸು ಬರದೇ ಇದ್ದ ಕಾರಣ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ತಡವಾಗಿ ದೂರು ದಾಖಲಿಸುತ್ತಿರುವುದಾಗಿ ತಿಳಿಸಿದ್ದಾರೆ.
Next Story





