ಉಡುಪಿ; ಸಾರ್ವಜನಿಕರಿಂದಲೇ ರಸ್ತೆಗೆ ಬಿದ್ದ ಬೃಹತ್ ಮರ ತೆರವು

ಉಡುಪಿ, ಜೂ.19: ಮಲ್ಪೆ-ಉಡುಪಿ ಮುಖ್ಯ ರಸ್ತೆಯಲ್ಲಿರುವ ಕಲ್ಮಾಡಿ ಕೊರಗಜ್ಜ ದೈವಸ್ಥಾನ ಬಳಿ ಕಳೆದ 10 ದಿನಗಳಿಂದ ರಸ್ತೆಯಲ್ಲಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಮರವನ್ನು ಸಾರ್ವಜನಿಕರೇ ಸೇರಿ ಮಂಗಳವಾರ ತೆರವು ಗೊಳಿಸಿದರು.
ಹತ್ತು ದಿನಗಳ ಹಿಂದೆ ಭಾರೀ ಗಾಳಿಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಿ ಬಿದ್ದಿದ್ದು, ಇದರಿಂದ ಸಾರ್ವಜನಿಕರು ತೀರಾ ತೊಂದರೆ ಅನು ಭವಿಸುತ್ತಿದ್ದರು. ಇದನ್ನು ಅರಿತ ಸಮಾಜ ಸೇವಕ ಸುಂದರ್ ಜೆ.ಕಲ್ಮಾಡಿ ತನ್ನ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಿದರು. ರಂಜಿತಾ ಪಾಲನ್, ಕೃಷನ್ ಕಲ್ಮಾಡಿ, ವಿಜಯಾ, ವಿನಯ ಕಲ್ಮಾಡಿ ಸಹಕರಿಸಿದರು.
Next Story





