ದಾವಣಗೆರೆ: ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತ್ಯು

ದಾವಣಗೆರೆ,ಜೂ.19: ಟ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ ಬಳಿ ಮಂಗಳವಾರ ಸಂಜೆ ನಡೆದಿದೆ.
ಹನುಮಂತ (34) ಫಕೀರಪ್ಪ (35) ಮೃತಪಟ್ಟ ಯುವಕರು. ದಾವಣಗೆರೆಯಿಂದ ಹರಪನಹಳ್ಳಿ ಕಡೆಗೆ ಕಬ್ಬಿಣ ತುಂಬಿಕೊಂಡು ಹೋಗುತ್ತಿದ್ದ ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕಬ್ಬಿಣದ ಸರಳುಗಳು ಬಿದ್ದು ಚಾಲಕ ಹನುಮಂತಪ್ಪ, ಪಕ್ಕದಲ್ಲಿ ಕುಳಿತಿದ್ದ ಫಕೀರಪ್ಪ ಮೃತಪಟ್ಟಿದ್ದಾರೆ.
ಅರಸೀಕೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





