ಚಂದ್ರಶೇಖರ ಕಂಬಾರಗೆ ‘ಜೆ.ಹೆಚ್.ಪಟೇಲ್’ ಪ್ರಶಸ್ತಿ

ಬೆಂಗಳೂರು, ಜೂ.20: ವಿ.ಸೋಮಣ್ಣ ಪ್ರತಿಷ್ಠಾನ ಪ್ರದಾನಿಸುವ ಪ್ರಸ್ತುತ ಸಾಲಿನ ‘ಜೆ.ಹೆಚ್.ಪಟೇಲ್’ ಪ್ರಶಸ್ತಿಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಜುಲೈ 2ನೇ ವಾರದಲ್ಲಿ ಪ್ರತಿಷ್ಠಾನದಿಂದ ನಡೆಯಲಿರುವ ಬಸವ ಜಯಂತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಅರುಣ್ ಸೋಮಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





