ಎಲ್ಲ ಪೊಲೀಸ್ ಠಾಣೆಗೆ ಅತ್ಯಾಚಾರ ತಪಾಸಣಾ ಕಿಟ್ ಪೂರೈಕೆಯಾಗಲಿ: ಮನೇಕಾ ಗಾಂಧಿ

ಹೊಸದಿಲ್ಲಿ, ಜೂ. 20: ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಅತ್ಯಾಚಾರ ತಪಾಸಣಾ ಕಿಟ್ ಲಭ್ಯವಾಗುವಂತೆ ಮಾಡಬೇಕು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಸಾಕ್ಷಿ ಸಲ್ಲಿಸಲು ಕೂಡಲೇ ವೈದ್ಯಕೀಯ ಪರೀಕ್ಷೆ ಹಾಗೂ ನೆರವು ನೀಡಲು ಈ ಕಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಕಿಟ್ ಟೆಸ್ಟ್‌ಟ್ಯೂಬ್‌ಗಳು, ಬಾಟಲಿಗಳು ಹಾಗೂ ರೂ. 200ರಿಂದ ರೂ. 300 ವರೆಗೆ ವೆಚ್ಚ ಒಳಗೊಂಡಿರುತ್ತದೆ. ಇದರ ವಸ್ತುಗಳು ಹಾಗೂ ವರ್ಗೀಕರಣವನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಅಂತಿಮಗೊಳಿಸುತ್ತಾರೆ. ತರುವಾಯ ಇದನ್ನು ರಾಜ್ಯ ಸರಕಾರ ಸ್ವತಂತ್ರವಾಗಿ ಅಸ್ತಿತ್ವಕ್ಕೆ ತರಲಿದೆ ಎಂದು ಅವರು ಹೇಳಿದ್ದಾರೆ. ಇಂತಹ ಕಿಟ್‌ಗಳ ಮೊದಲ ಹೊರೆಯನ್ನು ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೋದ ಮೂಲಕ ಸಂಗ್ರಹಿಸಲಾಗಿದೆ. ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





