Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಂಗಾಂಶ ಕೃಷಿಯಿಂದ ತಾಯ್ನಾಡಿನಲ್ಲೇ 32...

ಅಂಗಾಂಶ ಕೃಷಿಯಿಂದ ತಾಯ್ನಾಡಿನಲ್ಲೇ 32 ವಿಧದ ಖರ್ಜೂರ ಬೆಳೆದ ನಿಝಾಮುದ್ದೀನ್

ವಾರ್ತಾಭಾರತಿವಾರ್ತಾಭಾರತಿ20 Jun 2018 7:44 PM IST
share
ಅಂಗಾಂಶ ಕೃಷಿಯಿಂದ ತಾಯ್ನಾಡಿನಲ್ಲೇ 32 ವಿಧದ ಖರ್ಜೂರ ಬೆಳೆದ ನಿಝಾಮುದ್ದೀನ್

ಚೆನ್ನೈ, ಜೂ.20: ಸಿಹಿಸಿಹಿಯಾದ ಖರ್ಜೂರಗಳು ಕೇವಲ ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರ ಬೆಳೆಯಲ್ಪಡುತ್ತವೆ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆಯಾದರೂ ದೇಶದ ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಖರ್ಜೂರದ ಮರಗಳನ್ನು  ಬೆಳೆಸಲಾಗುತ್ತಿದೆ. ತಮಿಳುನಾಡು ಕೂಡ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು, ಅಲ್ಲಿನ ವಾತಾವರಣ ಕೂಡ ಈ ಖರ್ಜೂರ ಮರಗಳಿಗೆ ಅನುಕೂಲಕರವಾಗಿದೆ.  ಖರ್ಜೂರ ಬೆಳೆಗಾರರಲ್ಲಿ ಒಬ್ಬರು ಅಪರೂಪದ ಬೆಳೆಗಾರರಿದ್ದಾರೆ. ಅಂಗಾಂಶ ಕೃಷಿಯ ಮೂಲಕ ಅವರು ಖರ್ಜೂರ ಬೆಳೆಯುವಲ್ಲಿ ಕ್ರಾಂತಿಯನ್ನೇ ಸಾಧಿಸಿದ್ದಾರೆನ್ನಬಹುದು.

ಅವರೇ ಧರ್ಮಪುರಿ ಜಿಲ್ಲೆಯ ಅರಿಯಕುಲಂ ಎಂಬಲ್ಲಿನ ನಿಝಾಮುದ್ದೀನ್ ಎಸ್.  ತಮ್ಮ ತೋಟ ಹಾಗೂ ನರ್ಸರಿಯಲ್ಲಿ ಅವರು ಒಟ್ಟು 32 ವಿಧದ ಖರ್ಜೂರ ಮರಗಳನ್ನು ಬೆಳೆಸಿದ್ದಾರೆ. ಅವರ ತೋಟವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಲಿಯಹ್ ಡೇಟ್ಸ್ ಮಾಲಕರಾಗಿರುವ ನಿಝಾಮುದ್ದೀನ್ ಅವರು ತಮ್ಮ ತವರು ರಾಜ್ಯದಲ್ಲಿ ಈ ಬೆಳೆಯನ್ನು ಬೆಳೆಸುವ ಮನಸ್ಸು ಮಾಡಿದ್ದು ಅವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾಗ.

"ಸೌದಿ ಅರೇಬಿಯಾದಲ್ಲಿ ಬೆಳೆಯುವಂತಹುದೇ ಖರ್ಜೂರಗಳನ್ನು ಭಾರತದಲ್ಲಿ ಏಕೆ ಬೆಳೆಸಬಾರದೆಂದು ಯೋಚಿಸಿ ಅಲ್ಲಿಂದ ಬರುವಾಗ ನೂರು ಗಿಡಗಳನ್ನು ತಂದು ನೆಟ್ಟಿದ್ದೆ. ಅವುಗಳು ಫಲ ನೀಡಿದೆ" ಎಂದು ಹೇಳುವ ಅವರಿಗೆ ಹಿಂದಿರುಗಿ ನೋಡುವ ಪರಿಸ್ಥಿತಿಯೇ ಎದುರಾಗಿಲ್ಲ. ಅವರ ತೋಟದಲ್ಲೀಗ 32ಕ್ಕೂ ಅಧಿಕ ಜಾತಿಯ ಖರ್ಜೂರಗಳ ಮರಗಳಿವೆ. ಬರ್ಹೀ ಖರ್ಜೂರಕ್ಕೆ ಕೆಜಿಗೆ ರೂ 300 ಬೆಲೆಯಿದೆ. ಪ್ರತಿ ಗಿಡದಿಂದ ಸುಮಾರು 200 ಕೆಜಿ ಬರ್ಹೀ ಖರ್ಜೂರ ದೊರೆಯುತ್ತದೆ ಎಂದು ನಿಝಾಮುದ್ದೀನ್ ಹೇಳುತ್ತಾರೆ.

ವರ್ಷಗಳು ಕಳೆದಂತೆ ಅವರು ಅಂಗಾಂಶ ಕೃಷಿಯ ಲಾಭ ಅರಿತು ಅಂಗಾಂಶ ಗಿಡಗಳನ್ನು ವಿದೇಶದಿಂದ ಇಲ್ಲಿಗೆ ತಂದು ಅವುಗಳನ್ನು ನೆಟ್ಟಿದ್ದರು. ಕೇವಲ ಎರಡೂವರೆ ವರ್ಷಗಳಲ್ಲಿಯೇ ಅವುಗಳು ಫಲ ನೀಡಲು ಆರಂಭಿಸಿದ್ದವು. ಅಂಗಾಂಶ ಕೃಷಿಯ ಮೂಲಕ ಬೆಳೆಯಲಾದ ಗಿಡಗಳನ್ನು ಅಬುಧಾಬಿಯಿಂದ ತರಿಸಿ ಅವುಗಳನ್ನು ಭಾರತದಾದ್ಯಂತ  ಮಾರಾಟ ಮಾಡಲಾಗುತ್ತದೆ ಎಂದೂ ಅವರು ವಿವರಿಸುತ್ತಾರೆ. ಖರ್ಜೂರದಿಂದ ಸಿರಪ್, ಚಾಕೊಲೇಟ್ ಮುಂತಾದ ಉಪ ಉತ್ಪನ್ನಗಳನ್ನು ತಯಾರಿಸುವ ಯೋಚನೆಯೂ ನಿಝಾಮುದ್ದೀನ್ ಅವರಿಗಿದೆ.

ಕೃಪೆ: english.alarabiya.net

share
ವಾರ್ತಾಭಾರತಿ
ವಾರ್ತಾಭಾರತಿ
Next Story
X