ಬಹುಮಾನಕ್ಕೆ ರಂಗಭೂಮಿ ಕೃತಿ ಆಹ್ವಾನ
ಬೆಂಗಳೂರು, ಜೂ.20: ಕರ್ನಾಟಕ ನಾಟಕ ಅಕಾಡೆಮಿಯಿಂದ 2017ನೆ ಸಾಲಿನಲ್ಲಿ ಪ್ರಕಟವಾಗಿರುವ ರಂಗಭೂಮಿಗೆ ಸಂಬಂಧಿಸಿದ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಹ್ವಾನಿಸಲಾಗಿದೆ.
ಕೃತಿಗಳು ಜನವರಿ 2017ರಿಂದ ಡಿಸೆಂಬರ್ 2017ರವರೆಗೆ ಕೃತಿ ಪ್ರಕಟವಾಗಿರಬೇಕು. ಪುಸ್ತಕಗಳನ್ನು ಯಾವುದೇ ಪದವಿ, ಪಿಎಚ್‌ಡಿ ಹಾಗೂ ಪಠ್ಯಪುಸ್ತಕಕ್ಕೆ ಸಿದ್ಧಪಡಿಸಿದ ವಿಷಯವಾಗಿರಬಾರದು. ನಾಟಕದ ಕೃತಿಯಾಗಿರಬಾರದು. ರಂಗಭೂಮಿಯ ವಿಷಯವನ್ನಾಧರಿಸಿದ ಪುಸ್ತಕವಾಗಿರಬೇಕು.
ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಆಸಕ್ತರು ಹೆಸರು, ವಿಳಾಸ, ಪ್ರಕಟನೆ ವರ್ಷ ನಮೂದಿಸಿ, ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆಸಿ ರಸ್ತೆ ಬೆಂಗಳೂರು-02 ಇಲ್ಲಿಗೆ ಸೆ.30ರೊಳಗೆ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.080-22237484ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





