ಪ್ರತ್ಯೇಕ ಪ್ರಕರಣ: ಐವರು ನಾಪತ್ತೆ
ಬೈಂದೂರು, ಜೂ.20: ಯಡ್ತರೆ ಗ್ರಾಮದ ಯೋಜನ ನಗರದ ಇಶ್ರತ್ ಎಂಬವರ ಮಗಳು ರೇಷ್ಮಾ ಬಾನು (20) ಎಂಬಾಕೆ ಜೂ.18ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಅದೇ ರೀತಿ ಬಿಜೂರು ಗ್ರಾಮದ ಬವಳಾಡಿ ಅಂಗಡಿಬೆಟ್ಟುವಿನ ಗೋಪಾಲ ನಾಯ್ಕ ಎಂಬವರ ಮಗಳು ಪವಿತ್ರಾ (23) ಎಂಬಾಕೆ ಜೂ.18ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾಳೆ.
ಈ ಎರಡೂ ಪ್ರಕರಣಗಳು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬ್ರಹ್ಮಾವರ: ಉಡುಪಿ ಕುಕ್ಕಿಕಟ್ಟೆ ಇಂದಿರಾನಗರದ ನಿವಾಸಿ ಸಾದಿಕ್ (28) ಎಂಬವರು ಜೂ.3ರಂದು ಸಂಜೆ ವೇಳೆ ಯಡ್ತಾಡಿ ಗ್ರಾಮದ ಸಾಯಿಬರಕಟ್ಟೆ ಕಳಾಂಗಡಿ ಸರ್ಕಲ್ ಬಳಿಯ ನೂರಾನಿ ಮಟನ್ ಚಿಕನ್ ಸ್ಟಾಲ್ ಅಂಗಡಿ ಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಕಾರ್ಕಡ ಕುಂಜಿಗುಡಿ ಬೆಟ್ಟು ನಿವಾಸಿ ರಮೇಶ್ ಭಂಡಾರಿ ಎಂಬವರ ಮಗಳು ಸವಿತಾ(24) ಎಂಬವರು ತಾನು ಕೆಲಸ ಮಾಡುವ ಸಾಲಿ ಗ್ರಾಮದ ಜನರಲ್ ಸ್ಟೋರ್‌ಗೆ ಜೂ.19ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕಂಡ್ಲೂರು ಜೆ.ಎಂ.ರಸ್ತೆಯ ಮುಹಮ್ಮದ್ ರಫೀಕ್ ಎಂಬವರ ಮಗ ಜಿ. ಮುಹಮ್ಮದ್ ಫರ್ಹಾನ್(23) ಎಂಬವರು ಹಬ್ಬಕ್ಕೆ ಹೊಸದಾಗಿ ಖರೀದಿಸಿದ ಬಟ್ಟೆಯನ್ನು ಬದಲಾವಣೆ ಮಾಡಿ ತರುವುದಾಗಿ ಜೂ.18ರಂದು ಮನೆಯಿಂದ ಕುಂದಾಪುರಕ್ಕೆ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







