ವಿಚ್ಛೇದನ ನೀಡುವಂತೆ ಬೆದರಿಸಿ ಪತ್ನಿಯ ಕೊಲೆಯತ್ನ: ದೂರು
ಕುಂದಾಪುರ, ಜೂ.20: ಕಳೆದ 6 ತಿಂಗಳಿನಿಂದ ವಿಚ್ಛೇದನೆ ನೀಡುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ, ಕೊಲೆಗೆ ಯತ್ನಿಸಿದ ಪತಿ ಕೋಡಿಯ ಸಯ್ಯದ್ ಮೊಹಮ್ಮದ್ ವಿರುದ್ಧ ಸಫಿಯಾ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಯ್ಯದ್ ಮುಹಮ್ಮದ್ ಜೂ.15ರಂದು ಕೊಲೆ ಮಾಡುವ ಉದ್ದೇಶದಿಂದ ಸಫಿಯಾಗೆ ರಾಡ್‌ನಿಂದ ಮಾರಾಣಾಂತಿಕ ಹಲ್ಲೆಗೈದಿದ್ದು, ವಿಚ್ಛೇಧನೆ ನೀಡದಿ ದ್ದರೆ ಇಬ್ಬರು ಮಕ್ಕಳು ಸಹಿತ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರು ವುದಾಗಿ ದೂರಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಸಫಿಯಾ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಫಿಯಾ 10 ವರ್ಷಗಳ ಹಿಂದೆ ಸಯ್ಯದ್ ಮುಹಮ್ಮದ್ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಆದರೆ ಕಳೆದ 6 ತಿಂಗಳಿನಿಂದ ನನ್ನ ಪತಿ ಬೇರೆ ಮದುವೆಯಾಗುತ್ತೆನೆಂದು ನನಗೆ ದೈಹಿಕ ಹಾಗೂ ಮಾನಸಿಕ ವಾಗಿ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಸಫಿಯಾ ದೂರಿನಲ್ಲಿ ತಿಳಿಸಿ ದ್ದಾರೆ. ಸಯ್ಯದ್ ಮುಹಮ್ಮದ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 307, 498 ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





