ಜೂ. 23: ಅಲ್ ಮದೀನ ನ್ಯೂ ಬೀಪ್ರಿ- ಸ್ಕೂಲ್ ಶುಭಾರಂಭ
ನರಿಂಗಾನ, ಜೂ. 20: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಶೈಕ್ಷಣಿಕ ಸೇವೆಯ ಇನ್ನೊಂದು ಹೆಜ್ಜೆಯಾಗಿ ವಿನೂತನ ಮಾದರಿಯ ಇಸ್ಲಾಮಿಕ್ ಪ್ರಿ-ಸ್ಕೂಲ್ ಇದೇ ಜೂನ್ 23ಕ್ಕೆ ಶುಭಾರಂಭಗೊಳ್ಳಲಿದೆ. ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕರ್ನಾಟಕದ ವಸತಿ, ನಗರಾಭಿವೃದ್ದಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜನಾಬ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯಿದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಉಜಿರೆ, ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಡಾ. ಇಫ್ತಿಕಾರ್ ಅಲಿ, ಸಿ. ಮಜೀದ್ ಹಾಜಿ ಮುಂಬೈ, ಹಾಜಿ ಎನ್.ಎಸ್.ಕರೀಂ, ಮನ್ಸೂರ್ ಹಿಮಮಿ, ಮುನೀರ್ ಸಖಾಫಿ, ಶಾಲಾ ಸಂಚಾಲಕ ಹಾಜಿ ಅಬ್ದುಲ್ಲ ಮೋರ್ಲ, ಕೆ.ಎಂ.ಕೆ ಮಂಜನಾಡಿ, ನರಿಂಗಾನ ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ತಿಳಿಸಿದ್ದಾರೆ.
Next Story





