ಉಡುಪಿ: ಗಾಯಾಳುವಿನ ಗುರುತು ಪತ್ತೆಗೆ ಮನವಿ

ಉಡುಪಿ, ಜೂ.20: ಮಂಗಳವಾರ ರಾತ್ರಿ ಆದಿ ಉಡುಪಿ ಫಿಶ್ ಮಾರ್ಕೆಟ್ ಬಳಿ ರಸ್ತೆ ದಾಟಲು ನಿಂತಿದ್ದ ಸುಮಾರು 30ರಿಂದ 35 ವರ್ಷ ಪ್ರಾಯದ ಅಪರಿಚಿತ ಯುವಕನಿಗೆ ಮಲ್ಪೆ ಕಡೆಯಿಂದ ಕರಾವಳಿ ಕಡೆಗೆ ಸಾಗುತಿದ್ದ ಅಪರಿಚಿತ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದು ಚಾಲಕ ಚಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.
ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಸ್ತುತ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರಿಚಿತ ಗಂಡಸಿನ ಬಲ ಕೈಯಲ್ಲಿ ಎಂ. ಸೀತಾ ಹಾಗೂ ಎಸ್‌ಬಿ ಎಂಬ ಹಚ್ಚೆ ಇದೆ.
ಈ ಗಾಯಾಳುವಿನ ಹೆಸರು, ವಿಳಾಸದ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಉಪನಿರೀಕ್ಷಕರು, ಉಡುಪಿ ಸಂಚಾರ ಠಾಣೆ (0820-2521332) ಅಥವಾ ಪೊಲೀಸ್ ವೃತ್ತ ನಿರೀಕ್ಷಕರು, ಉಡುಪಿ ವೃತ್ತ ( 0820-2520329) ಇವರಿಗೆ ತಿಳಿಸುವಂತೆ ಪೊಲೀಸರ ಪ್ರಕಟಣೆ ತಿಳಿಸಿದೆ.
Next Story





