ಸೌಂದರ್ಯ ಹಾಳಾಗುತ್ತದೆ ಎಂಬ ಭಯದಿಂದ ನಗರದ ಮಹಿಳೆಯರು ಮಕ್ಕಳಿಗೆ ಎದೆಹಾಲುಣಿಸುವುದಿಲ್ಲ ಎಂದ ಆನಂದಿಬೆನ್ ಪಟೇಲ್

ಇಂದೋರ್, ಜೂ.21: ಪಟ್ಟಣದ ಮಹಿಳೆಯರು ಸೌಂದರ್ಯ ಹಾಳಾಗುತ್ತದೆ ಎಂಬ ಭಯದಿಂದ ಮಕ್ಕಳಿಗೆ ಎದೆ ಹಾಲುಣಿಸುವುದಿಲ್ಲ ಎಂದು ಮಧ್ಯ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿದ್ದಾರೆ.
"ಎದೆಹಾಲುಣಿಸುವುದರಿಂದ ಸೌಂದರ್ಯ ಹಾಳಗುತ್ತದೆ ಎಂದು ಇಂದಿಗೂ ನಗರದ ಮಹಿಳೆಯರು ನಂಬುತ್ತಾರೆ. ಅದೇ ಕಾರಣದಿಂದ ಅವರು ಮಕ್ಕಳಿಗೆ ಎದೆಹಾಲುಣಿಸುವುದಿಲ್ಲ. ಬದಲಿಗೆ ಬಾಟಲಿ ಹಾಲು ನೀಡುತ್ತಾರೆ" ಎಂದು ಇಂದೋರ್ ನ ಕಾಶಿಪುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹೇಳಿದರು.
ನವಜಾತ ಶಿಶು ಹಾಗು ತಾಯಿಯ ಆರೋಗ್ಯಕ್ಕೆ ಸಮರ್ಪಕ ಆಹಾರವೂ ಅಗತ್ಯ ಎಂದವರು ಹೇಳಿದರು. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು ಹೆಸರು ನೋಂದಾಯಿಸಬೇಕು ಎಂದು ಸಲಹೆ ನೀಡಿದರು.
Next Story





