ಯಾಸಿನ್ ಮಲಿಕ್ ಪೊಲೀಸ್ ವಶಕ್ಕೆ,ಹುರಿಯತ್ ಅಧ್ಯಕ್ಷ ಗೃಹಬಂಧನದಲ್ಲಿ

ಶ್ರೀನಗರ,ಜೂ.21: ಪ್ರತ್ಯೇಕತಾವಾದಿಗಳು ಪ್ರತಿಭಟನೆಗಳ ನೇತೃತ್ವ ವಹಿಸುವುದನ್ನು ತಡೆಯಲು ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದು,ಹುರಿಯತ್ ಕಾನ್‌ಫರೆನ್ಸ್ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.
ಮಲಿಕ್‌ರನ್ನು ಬೆಳಿಗ್ಗೆ ಶ್ರೀನಗರದ ಮೈಸುಮಾದಲ್ಲಿಯ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಕಟ್ಟರ್ ಹುರಿಯತ್ ಕಾನ್‌ಫರೆನ್ಸ್‌ನ ಅಧ್ಯಕ್ಷ ಸೈಯದ್ ಅಲಿ ಶಾ ಗೀಲಾನಿ ಅವರು ಈಗಾಗಲೇ ಗೃಹಬಂಧನದಲ್ಲಿದ್ದಾರೆ.
ಇತ್ತೀಚಿಗೆ ಭದ್ರತಾ ಪಡೆಗಳಿಂದ ಗುಂಡು ಹಾರಾಟದಲ್ಲಿ ನಾಗರಿಕರ ಹತ್ಯೆಗಳು ಮತ್ತು ಅಪರಿಚಿತ ದುಷ್ಕರ್ಮಿಗಳಿಂದ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರ ಹತ್ಯೆಯನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ಗುರುವಾರ ಪ್ರತಿಭಟನೆಗೆ ಕರೆ ನೀಡಿದ್ದರು.
Next Story





