ಮಣಿಪಾಲ: ಮಾಹೆಯಲ್ಲಿ ವಿಶ್ವ ಯೋಗ ದಿನಾಚರಣೆ

ಮಣಿಪಾಲ, ಜೂ.21: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಸಿಐಎಂಆರ್‌ನ ಯೋಗ ವಿಭಾಗದ ಸಹಯೋಗ ದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿತ್ತು.
ಮಾಹೆ ವಿವಿಯ ಅಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿ ಗಳು ಹಾಗೂ ಇತರರು ಈ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ಮಾಹೆ ಕ್ಯಾಂಪಸ್‌ನ ಯೋಗಾಭ್ಯಾಸ ಅತ್ತಾವರದಲ್ಲಿ ನಡೆಯಿತು.
ಮೊದಲು ಯುಜಿಸಿಯ ಮಾರ್ಗದರ್ಶಿಯಂತೆ ಮೊದಲು ಯೋಗದ ಪ್ರಾತ್ಯಕ್ಷಿಕೆ ಹಾಗೂ ಅಭ್ಯಾಸಗಳು ನಡೆದವು. ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಅವರು ಯೋಗದ ವಿವಿಧ ಆಸನಗಳು, ಪ್ರಾಣಾಯಾಮ, ವಿಶ್ರಾಂತಿಯ ತಂತ್ರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಬಳಿಕ ಅದನ್ನು ಸೇರಿದ ನೂರಾರು ಮಂದಿ ಪ್ರದರ್ಶಿಸಿದರು.
ಬಳಿಕ ಮಾಹೆಯ ಹೆಲ್ತ್ ಸಾಯನ್ಸ್ ವಿಭಾಗದ ಸಂಶೋಧನಾ ನಿರ್ದೇಶಕ ಡಾ.ಎನ್.ಉಡುಪ ಅವರು ಯೋಗದ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಹಾಗೂ ಇತರರು ಉಪಸ್ಥಿತರಿದ್ದರು.





