16ರ ಘಟ್ಟ ಪ್ರವೇಶಿಸಿದ ಫ್ರಾನ್ಸ್
ಪೆರು ವಿರುದ್ಧ 1-0 ಜಯ

ಎಕಟೆರಿನ್‌ಬರ್ಗ್, ಜೂ.21: ಫಿಫಾ ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡ ಗುರುವಾರ ಪೆರು ವಿರುದ್ಧ 1-0 ಅಂತರದಲ್ಲಿ ಜಯ ಗಳಿಸುವ ಮೂಲಕ 16ರ ಘಟ್ಟ ಪ್ರವೇಶಿಸಿದೆ.
ಫ್ರಾನ್ಸ್ ತಂಡದ ಕೈಲ್ಯಾನ್ ಎಂಬಾಪೆ 34ನೇ ನಿಮಿಷದಲ್ಲಿ ದಾಖಲಿಸಿದ ಏಕೈಕ ಗೋಲು ನೆರವಿನಲ್ಲಿ ಫ್ರಾನ್ಸ್ ವಿಜಯದ ನಗೆ ಬೀರಿತು.
ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿ ಫ್ರಾನ್ಸ್ 2-1 ಅಂತರದಲ್ಲಿ ಜಯ ಗಳಿಸಿತ್ತು.
Next Story





