ಮಂಡ್ಯ: ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ಮೃತ್ಯು

ಮಂಡ್ಯ, ಜೂ.21: ನಗರ ಮತ್ತು ಹನಕೆರೆ ರೈಲ್ವೆ ನಿಲ್ದಾಣ ಮಧ್ಯೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಸುಮಾರು 70 ವರ್ಷದ ಈ ವೃದ್ಧೆ ಸಾಧಾರಣ ಮೈಕಟ್ಟು ಹೊಂದಿದ್ದು, ಬೊಚ್ಚುಬಾಯಿ ಒಂದು ಹಲ್ಲು ಇರುತ್ತದೆ. ಬಲಗಾಲಿನ ಪಾದದ ಮೇಲಿನ ಮೂಳೆ ಬೆಂಡಾಗಿದ್ದು, ಬಲಕಾಲಿನಲ್ಲಿ ಎರಡು ಮೀನಿನ ಹಚ್ಚೆ, ಬಲಗೈಯಲ್ಲಿ ಹೂವಿನ ಹಚ್ಚೆ ಗುರುತು ಇದೆ.
ನೇರಳೆ ಹಾಗೂ ಹಳದಿ ಬಣ್ಣದ ಚಿತ್ರವಿರುವ ನೈಲಾನ್ ನೈಟಿ, ಕಪ್ಪು ಬಣ್ಣದ ಸ್ವೆಟರ್ ಧರಿಸಿದ್ದು, ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಉಪಠಾಣೆ(ದೂ.08232-222340) ಅಥವಾ ಮೈಸೂರಿನ ರೈಲ್ವೆ ಪೊಲೀಸ್ ಠಾಣೆ(ದೂ.08231-2516579) ಸಂಪರ್ಕಿಸಬಹುದು.
Next Story





