ಮಂಡ್ಯ: ಜಮೀನು ವಿವಾದ; ತಂದೆ-ಮಕ್ಕಳಿಂದ ಮಹಿಳೆಗೆ ಹಲ್ಲೆ

ಮಂಡ್ಯ,ಜೂ.21: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಅಪ್ಪ ಮಕ್ಕಳು ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಬಿ ಕಾವಲು ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಪ್ರೇಮಮ್ಮ(55) ಎಂದು ತಿಳಿದುಬಂದಿದೆ. ಜಮೀನು ವಿಚಾರವಾಗಿ ಪಕ್ಕದ ಜಮೀನು ಮಾಲೀಕ ಕಾಳೇಗೌಡ(60) ಹಾಗೂ ಮಕ್ಕಳಾದ ಚೇತನ್(30) ಮತ್ತು ಪ್ರವೀಣ್ (28) ಎಂಬುವವರು ಪ್ರೇಮಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸಾಕ್ಷಿ ಸಹಿತ ಕೆ.ಆರ್,ಪೇಟೆ ಗ್ರಾಮಾಂತರ ಠಾಣೆಯಲ್ಲಿ ಮಹಿಳೆ ದೂರು ನೀಡಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿಗಳು ತಲೆ ಮರೆಸಿಕೊಂಡಿದ್ದು, ಸೆರೆಗೆ ಬಲೆ ಬೀಸಿದ್ದಾರೆ.
Next Story





