ಉಡುಪಿ: ಸಮುದ್ರಕ್ಕೆ ಇಳಿಯುವುದಕ್ಕೆ ನಿಷೇಧ
ಉಡುಪಿ, ಜೂ.22: ಮುಂಗಾರು ಮಳೆ ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭ ಗೊಂಡಿದ್ದು, ಮಳೆಗಾಲದಲ್ಲಿ ಗಾಳಿಯ ಕಾರಣ ಸಮುದ್ರದ ಅಲೆಗಳ ಆರ್ಭಟದ ತೀವ್ರತೆಯನ್ನು ಗಮನಿಸದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವ ಪರಿಣಾಮ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಮಲ್ಪೆ ವಡಬಾಂಡೇಶ್ವರ, ಪಡುಬಿದ್ರೆ, ಕಾಪು, ಕುಂದಾಪುರ-ಕೋಡಿ ಲೈಟ್‌ಹೌಸ್, ತ್ರಾಸಿ-ಮರವಂತೆ, ಬೈಂದೂರು-ಸೋಮೇಶ್ವರ(ಒತ್ತಿನೆಣೆ) ಬೀಚ್‌ಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ, ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ.
ಸಾರ್ವಜನಿಕರ ಜೀವರಕ್ಷಣೆಯ ದೃಷ್ಟಿಯಿಂದ ಈಗಾಗಲೇ ಬೀಚ್‌ಗಳಿಗೆ 10 ಮಂದಿ ಗೃಹರಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಆದ್ದರಿಂದ ಅಹಿತಕರ ಘಟನೆಗಳನ್ನು ತಪ್ಪಿಸುವ ದೃಷ್ಟಿ ಯಿಂದ, ಮುಂಜಾಗೃತ ಕ್ರಮವಾಗಿ ನಿರ್ಬಂದ ವಿಧಿಸಿದ್ದು, ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೆೀರಿ ಪ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.





