ವಸತಿ ರಹಿತರ, ನಿವೇಶನ ರಹಿತರ ಸಮೀಕ್ಷೆ
ಉಡುಪಿ, ಜೂ.22: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(ಗ್ರಾ) ಸಾಮಾಜಿಕ, ಆರ್ಥಿಕ, ಜಾತಿಗಣತಿ 2011ರ ಶಾಶ್ವತ ಪಟ್ಟಿಗೆ ಅರ್ಹ ಫಲಾನುಭವಿಗಳನ್ನು ಸೇರಿಸಲು ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಸಮೀಕ್ಷೆಯ ವಿವರವನ್ನು ವೆಬ್‌ಸೈಟ್ ನಲ್ಲಿ ಅಳವಡಿಸಲು ಜೂ.25 ಕೊನೆ ದಿನವಾಗಿದೆ. ಇನ್ನು ಮುಂದೆ ರಾಜ್ಯ ಅಥವಾ ಕೇಂದ್ರ ಪುರಸ್ಕೃತ ವಸತಿ ಯೋಜನೆ ಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಈ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕಾಗಿದೆ.
ಆದುದರಿಂದ ಅರ್ಹ ವಸತಿ ಮತ್ತು ನಿವೇಶನ ರಹಿತರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್‌ನ್ನು ಕೂಡಲೇ ಸಂಪರ್ಕಿಸಿ, ದಾಖಲಾತಿಗಳೊಂದಿಗೆ ಹೆಸರನ್ನು ನೊಂದಾಯಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಾಪಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





