ಉಡುಪಿ; ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಣೆ
ಉಡುಪಿ, ಜೂ.22: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ 2017-18ನೇ ಸಾಲಿನ ಯುವವಿಜ್ಞಾನಿ ಪ್ರಶಸ್ತಿಗಾಗಿ 9ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸ್ವೀಕರಿಸುವ ಅಂತಿಮ ದಿನವನ್ನು ಜೂನ್30ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜುಲೈ 7ಕ್ಕೆ ಮುಂದೂಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರಾವಿಪ ಕಚೇರಿ ದೂರವಾಣಿ 080-26718939, ಮೊ:9483549159/9008442557/9449530245ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





