ಹಾಲಾಡಿ: ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಕುಂದಾಪುರ, ಜೂ.22: ಶಿವಮೊಗ್ಗ - ಕುಂದಾಪುರ ರಾಜ್ಯ ಹೆದ್ದಾರಿಯ ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್‌ನಲ್ಲಿ ಪೆಟ್ರೋಲ್ ಟ್ಯಾಂಕರೊಂದು ಮಗುಚಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಮಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ಹೂವಿನಹಡಗಲಿಗೆ ಹೊರಟಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ವಾಹನವೊಂದಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಸುಬ್ರಾಯ ಆಚಾರ್ ಎಂಬವರ ಮನೆಯ ಅಂಗಳದ ಎದುರು ಪಲ್ಟಿಯಾಯಿತ್ತೆನ್ನಲಾಗಿದೆ.
ಇದರಿಂದ ಚಾಲಕ ಮಹೇಶ ಎಂಬವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪೆಟ್ರೋಲ್ ಸೋರಿಕೆಯಾಗದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಸ್ಥಳಕ್ಕೇ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿ ಹಾಗೂ ಶಂಕರನಾರಾಯಣ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
Next Story





