ಮೈಸೂರು: ಇಸ್ಟೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಹೃದಯಾಘಾತದಿಂದ ವ್ಯಕ್ತಿ ಮೃತ್ಯು

ಮೈಸೂರು,ಜೂ.22: ಇಸ್ಪೀಟ್ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ದಾಳಿಗೆ ಹೆದರಿ ಕುಸಿದು ಬಿದ್ದ ವ್ಯಕ್ತಿಯೋರ್ವ ಹೃದಯಾಘತದಿಂದ ಮೃತಪಟ್ಟ ಘಟನೆ ಮೈಸೂರಿನ ಸುನ್ನಿ ಚೌಕದಲ್ಲಿ ನಡೆದಿದೆ.
ಮಂಡಿ ಮೊಹಲ್ಲಾದ ನಿವಾಸಿ ಟಿ.ವಿ.ಮೆಕ್ಯಾನಿಕ್ ಸಿರಾಜುದ್ದೀನ್ (41) ಮೃತ ವ್ಯಕ್ತಿ. ಕಳೆದ ಹಲವು ದಿನಗಳಿಂದ ಸುನ್ನೀ ಚೌಕದಲ್ಲಿ ಇಸ್ಪೀಟ್ ಆಡುತ್ತಿರುವುದಾಗಿ ಮಂಡಿ ಪೊಲೀಸ್ ಠಾಣೆಗ ದೂರು ಬಂದಿತ್ತು. ದೂರಿನ ಅನ್ವಯ ನಿನ್ನೆ ಸಂಜೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಎಂಟು ಮಂದಿಯ ಪೈಕಿ ಸಿರಾಜುದ್ದೀನ್ ಎಂಬಾತ ಕುಸಿದು ಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





