Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನರೇಗಾ ಯೋಜನೆಯ ಅವ್ಯವಹಾರ ಆರೋಪಿಗಳ ಪರ...

ನರೇಗಾ ಯೋಜನೆಯ ಅವ್ಯವಹಾರ ಆರೋಪಿಗಳ ಪರ ಜಿಪಂ ಸದಸ್ಯರಿಂದ ವಕಾಲತ್ತು: ಎಚ್.ಎಚ್.ದೇವರಾಜ್ ಆರೋಪ

ವಾರ್ತಾಭಾರತಿವಾರ್ತಾಭಾರತಿ22 Jun 2018 10:47 PM IST
share
ನರೇಗಾ ಯೋಜನೆಯ ಅವ್ಯವಹಾರ ಆರೋಪಿಗಳ ಪರ ಜಿಪಂ ಸದಸ್ಯರಿಂದ ವಕಾಲತ್ತು: ಎಚ್.ಎಚ್.ದೇವರಾಜ್ ಆರೋಪ

ಚಿಕ್ಕಮಗಳೂರು, ಜೂ.22: ಜಿಲ್ಲೆಯ ಏಳೆ ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಗ್ರಾಪಂಗಳಲ್ಲಿ ಎನ್‍ಆರ್‍ಇಜಿ ಯೋಜೆನಯಡಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ 2016-17ನೇ ಸಾಲಿನಲ್ಲಿ ನಡೆದ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾದವರಿಂದ ಅವ್ಯಹಾರದ ಹಣವನ್ನು ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸದಸ್ಯರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಗಳ ಪರ ವಕಾಲತ್ತು ವಹಿಸಿದ್ದಾರೆ. ಸರಕಾರದ ಅನುದಾನ ಬಡ ಕೃಷಿಕರಿಗೆ, ದೀನ ದಲಿತರಿಗೆ ತಲುಪಿಸುವ ಉದ್ದೇಶದಿಂದ ಬಿಡುಗಡೆಯಾಗಿದ್ದು, ಅವ್ಯವಹಾರ ಪ್ರಕರಣದ ವಿರುದ್ಧ ಧ್ವನಿ ಎತ್ತಬೇಕಾದ ಜಿಪಂ ಸದಸ್ಯರು ಆರೋಪಿಗಳ ಪರವಾಗಿ ಮಾತನಾಡಿರುವುದರ ಉದ್ದೇಶವೇನೆಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕೇಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲೂಕು ಸೇರಿದಂತೆ, ಕಡೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ತರೀಕೆರೆ, ಎನ್.ಆರ್.ಪುರ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 2014-15ನೇ ಸಾಲಿನಲ್ಲಿ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಅಧಿಕಾರಿಗಳು ಸಾಮಾಜಿಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿ ತಪ್ಪಿತಸ್ಥರಿಂದ ಅವ್ಯವಹಾರ ಆಗಿರುವ ಹಣವನ್ನು ವಸೂಲಿ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 4.25 ಕೋ.ರೂ. ಅವ್ಯವಹಾರ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರಕಾರದ ಈ ಅನುದಾನ ಬಡವರ, ರೈತರ ಕಲ್ಯಾಣಕ್ಕಾಗಿ ಜಾರಿ ಮಾಡಲಾಗಿತ್ತು. ಆದರೆ ಜಿಲ್ಲಾ ಪಂಚಾಯತ್ ಆಡಳಿತರೂಢ ಸದಸ್ಯರೂ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಈ ಅವ್ಯವಾರದ ಬಗ್ಗೆ ಮಾತನಾಡದೇ ಆರೋಪಿಗಳ ಪರ ವಕಾಲತ್ತು ವಹಿಸಿದ್ದಾರೆಂದು ದೇವರಾಜ್ ಕಿಡಿಕಾರಿದರು.

ಬಡ ಜನರ ಕಲ್ಯಾಣಕ್ಕಾಗಿ ಜಾರಿ ಮಾಡಿದ ಯೋಜನೆಗಳು ದುರ್ಬಳಕೆ ಆಗುತ್ತಿರುವುದರ ವಿರುದ್ಧ ಧ್ವನಿ ಎತ್ತಿ ಅವ್ಯವಹಾರಗಳನ್ನು ಬೆಳಕಿಗೆ ತರಬೇಕಾದ ಜಿಪಂ ಸದಸ್ಯರು ತಪ್ಪಿತಸ್ಥರನ್ನೇ ರಕ್ಷಿಸಲು ಮುಂದಾಗಿದ್ದಾರೆ. ಈ ಅವ್ಯವಹಾರ ಸಂಬಂಧ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಸಂಗ್ರಹಿಸಿದ್ದು, ಇಡೀ ಜಿಲ್ಲೆಯಾದ್ಯಂತ ನರೇಗಾ ಯೋಜನೆಯಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಭಾರೀ ಗೋಲ್‍ಮಾಲ್ ನಡೆಸಿರುವುದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರು ಒಂದಾಗಿದ್ದು, ಅವ್ಯವಹಾರಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಗರಣವನ್ನು ಹಳ್ಳ ಹಿಡಿಸಲು ಸಂಚು ರೂಪಿಸುತ್ತಿದ್ದಾರೆಂದು ದೂರಿದ ಅವರು, ಇದು ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹಗರಣವಾಗಿದ್ದು, ನರೇಗಾ ಯೋಜನೆಯಡಿ ಬಂದ ಅನುದಾನ ಜಿಪಂನ ಕೆಲ ನುಂಗಣ್ಣರ ಪಾಲಾಗಿದೆ. ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಈ ಸಂಬಂಧ ಸಿಎಂ ಕುಮಾರಸ್ವಾಮಿ ಹಾಗೂ ಕ್ಷೇತ್ರದ ಎಮ್ಮೆಲ್ಸಿಗಳಿಗೆ ತನಿಖೆಗೆ ಒತ್ತಾಯಿಸಿ ದಾಖಲೆಗಳ ಸಹಿತ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ ನರೇಗಾ ಯೋಜನಯಡಿ 4.25 ಲಕ್ಷ ರೂ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಂದ ಸರಕಾರದ ಹಣವನ್ನು ವಸೂಲಿ ಮಾಡುವುದರೊಂದಿಗೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ದೇವರಾಜ್ ಇದೇ ವೇಳೆ ಸರಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ಚಂದ್ರಪ್ಪ, ಹೊಲಗದ್ದೆ ಗಿರೀಶ್, ರಮೇಶ್, ಜಯರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸಿಇಒ ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆಂಬ ಜಿಪಂ ಸದಸ್ಯರ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವರಾಜ್, ಸಿಇಒ ಸರ್ವಾಧಿಕಾರಿ ದೋರಣೆ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚಿಸಿ ಕ್ರಮಕ್ಕೆ ಒತ್ತಾಯಿಸಬೇಕಿತ್ತು. ಅದನ್ನು ಬಿಟ್ಟು ಅಕ್ರಮದ ವಿರುದ್ಧ ಶಿಸ್ತುಕ್ರಮ ವಹಿಸಿದ ಅವರ ವಿರುದ್ಧ ಅಸಮದಾನ ವ್ಯಕ್ತಪಡಿಸಿ ಸಾರ್ವಜನಿಕರ ಹಣ ದುರುಪಯೋಗವಾಗುವುದುನ್ನು ಜಿಪಂ ಸದಸ್ಯರು ಬೆಂಬಲಿಸುತ್ತಿರುವುದರ ಉದ್ದೇಶವೇನೆಂದು ಪ್ರಶ್ನಿಸಿದರು.

ಎಲ್ಲೆಲ್ಲಿ ಅವ್ಯವಹಾರ: ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಹಸ್ತಿನಾಪುರ ಗ್ರಾಮದ ಸ.ನಂ.119ರ ಅನರ್ಹ ದೊಡ್ಡ ರೈತರೊಬ್ಬರ ಜಮೀನಿನಲ್ಲಿ ನಿಯಮ ಮೀರಿ ರಿವಿಟ್‍ಮೆಂಟ್ ಕಾಮಗಾರಿ ಮಾಡಲಾಗಿದೆ. ಈ ಆರೋಪದಡಿಯಲ್ಲಿ ಕಾಮಗಾರಿಯ ತಾಂತ್ರಿಕ ಸಹಾಯಕ ಪೂರ್ಣೇಶ್ ಹಾಗೂ ರೈತನಿಂದ 59,479 ರೂ.ವಸೂಲಿಗೆ ನೋಟಿಸ್ ನೀಡಲಾಗಿದೆ. ತರೀಕೆರೆ ತಾಲೂಕಿನ ಜಾವೂರು ಗ್ರಾಮದಲ್ಲಿ ಮೂವರು ನಿವಾಸಿಗಳ ಹೆಸರಿನಲ್ಲಿ ತಾಂತ್ರಿಕ ಸಹಾಯಕ ಕೌಂತಯ್ಯ ಎಂ.ಆರ್. ಎಂಬವರು ಜಾನುವಾರು ಶೆಡ್ ನಿರ್ಮಾಣದ ಹೆಸರನಲ್ಲಿ ಕಾಮಗಾರಿ ಮಾಡದೇ 10 ಸಾವಿರ ರೂ. ಬಿಲ್ ಮಾಡಿದ್ದಾರೆ. ಇದೇ ತಾಲೂಕಿ ತ್ಯಾಗದಕಟ್ಟೆ ಎಂಬಲ್ಲಿ ಇಂಗುಗುಂಡಿಗಳ ನಿರ್ಮಾಣ ಮಾಡದೇ ನಕಲಿ ದಾಖಲೆಗಳನ್ನು ತೋರಿಸಿ 18 ಸಾವಿರ ರೂ. ವಂಚಿಸಿದ್ದಾರೆ. ಇದೇ ಗ್ರಾಮದಲ್ಲಿ ದೇವಾಲಯದ ಜಾಗ ಸಮತಟ್ಟು ಮಾಡುವ ಕಾಮಗಾರಿ ಹೆಸರಿನಲ್ಲಿ ಕಾಮಗಾರಿ ಮಾಡದೇ 65 ಸಾವಿರ ವಂಚಿಸಲಾಗಿದೆ.

ಅನುವನಹಳ್ಳಿ ಗ್ರಾಮದಲ್ಲಿ ಯೋಜನೆಯಡಿ ಅವಕಾಶವಿಲ್ಲದಿದ್ದರೂ ಎರಡು ದೇವಾಲಯಗಳ ಆವರಣದಲ್ಲಿ ಕಲ್ಲುಚಪ್ಪಡಿ ಹಾಕಿಸುವ ನೆಪದಲ್ಲಿ 2 ಲಕ್ಷ, 20 ಸಾವಿರ ರೂ. ವಂಚಿಸಲಾಗಿದೆ. ಕಡೂರು ತಾಲೂಕಿನ ಕುಂಕನಾಡು ಗ್ರಾಮದಲ್ಲಿ ತಾಂತ್ರಿಕ ಸಹಾಯಕ ಕೃಷ್ಣಮೂರ್ತಿ ಎಂಬವರು ಇಬ್ಬರು ರೈತರ ಹೆಸರಿನಲ್ಲಿ ದಾಳಿಂಬೆ ಬೆಳೆ ವಿಸ್ತರಣೆ ಹೆಸರಿನಲ್ಲಿ ಕಾಮಗಾರಿ ನಿರ್ವಹಿಸದೇ 77 ಸಾವಿರ ರೂ. ವಂಚಿಸಿದ್ದಾರೆ. ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮದಲ್ಲಿ ತಾಂತ್ರಿಕ ಸಹಾಯಕ ಸುಮಿನ್ ಎಂಬವರು ದನದ ಕೊಟ್ಟಿಗೆ ನಿರ್ಮಾಣ ಮಾಡದೇ ಸತ್ತಿರುವ ವ್ಯಕ್ತಿಯ ಹೆಸರಿನ ಖಾತೆಗೆ ಹಣ ಜಮೆ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಮ್ಮಕ್ಕಿ ಗ್ರಾಮದ ಹಡ್ಡೆಗದ್ದೆಯಲ್ಲಿ ತಾಂತ್ರಿಕ ಸಹಾಯಕ ಅಜಿತ್ ಎಂಬವರು ರಿವಿಟ್‍ಮೆಂಟ್ ಕಾಮಗಾರಿ ಕಳಪೆಯಾಗಿ ನಿರ್ಮಿಸಿ ಬಿದ್ದು ಹೋಗಿದ್ದರೂ 83 ಸಾವಿರ ರೂ ಬಿಲ್ ಮಾಡಿದ್ದಾರೆ. ತಾಲೂಕಿನ ಊರುಬಗೆ ಗ್ರಾಮದಲ್ಲಿ ಮೂವರು ರೈತರ ಜಮೀನುಗಳಲ್ಲಿ ಕೃಷಿ ಹೊಂಡ ಕಾಮಗಾರಿಗೆ ಯಾವುದೇ ದಾಖಲೆಗಳಿಲ್ಲದೇ 70 ಸಾವಿರ ವಂಚಿಸಲಾಗಿದೆ. ಇದಲ್ಲದೇ ಈ ತಾಲೂಕುಗಳ ವ್ಯಾಪ್ತಿಯಲ್ಲಿ ನಡೆದ ಇನ್ನೂ ನೂರಾರು ಕಾಮಗಾರಿಗಳಲ್ಲಿ ಲಕ್ಷಾಂತರ ರೂ. ಅನುದಾನವನ್ನು ಸಂಬಂಧಿಸಿದ ತಾಂತ್ರಿಕ ಸಹಾಯಕರು ದುರುಪಯೋಗಪಡಿಸಿಕೊಂಡಿದ್ದಾರೆಂದು ದೇವರಾಜ್ ಸುದ್ದಿಗೋಷ್ಠಿ ವೇಳೆ ಮಾಹಿತಿ ನೀಡಿದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X