ಕೊಳ್ಳೇಗಾಲ: ಯುವಕನಿಗೆ ಮಚ್ಚಿನಿಂದ ಹಲ್ಲೆ

ಕೊಳ್ಳೇಗಾಲ,ಜೂ.22: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಯುವಕನಿಗೆ ಮಚ್ಚಿನಿಂದ ಹಲ್ಲೆ ನಡೆದಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಸಿದ್ದಯ್ಯನಪುರ ಗ್ರಾಮದ ಪ್ರಭುರಾಜ್(25) ಎಂಬಾತನು ಗಾಯಗೊಂಡ ಯುವಕ. ಪಟ್ಟಣದ ನಾಯಕ ಬಡಾವಣೆಯ ಅಭಿ, ಚೇತನ್(ಜ್ವಲ) ಹಾಗೂ ಅವರ ಸಹೋದರ ಸೇರಿದಂತೆ ಒಟ್ಟು ಆರು ಮಂದಿ ಹಲ್ಲೆ ಮಾಡಿದವರು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿವೈಎಸ್‍ಪಿ ಪುಟ್ಟಮಾದಯ್ಯ, ವೃತ್ತ ನೀರಿಕ್ಷಕ ರಾಜಣ್ಣ, ಹಾಗೂ ಎಸ್‍ಐ ವೀಣಾನಾಯಕ್ ಗಾಯಾಳುನಿಂದ ಪ್ರಕರಣ ಸಂಬಂಧ ವಿಚಾರಣೆ ಮಾಡಿದರು.
Next Story





