Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಗಾಡ್‌ಫಾದರ್‌ನ ಚಿತ್ರಕ್ಕೆ ಕಂಗನಾ ನಾಯಕಿ

ಗಾಡ್‌ಫಾದರ್‌ನ ಚಿತ್ರಕ್ಕೆ ಕಂಗನಾ ನಾಯಕಿ

ವಾರ್ತಾಭಾರತಿವಾರ್ತಾಭಾರತಿ23 Jun 2018 6:28 PM IST
share
ಗಾಡ್‌ಫಾದರ್‌ನ ಚಿತ್ರಕ್ಕೆ ಕಂಗನಾ ನಾಯಕಿ

‘ಲೈಫ್ ಇನ್ ಎ ಮೆಟ್ರೊ’ ಹಾಗೂ ‘ಗ್ಯಾಂಗ್‌ಸ್ಟರ್’ನಂತಹ ಚಿತ್ರಗಳನ್ನು ನೀಡಿರುವ ಕಂಗನಾ ರಾಣಾವತ್ ಮತ್ತು ಅನುರಾಗ್ ಕಶ್ಯಪ್, ಈಗ ಇನ್ನೊಂದು ಚಿತ್ರದಲ್ಲಿ ಮತ್ತೆ ಒಟ್ಟುಗೂಡುತ್ತಿದ್ದಾರೆ. ಈ ನಟಿ-ನಿರ್ದೇಶಕ ಜೋಡಿಯು, ‘ಇಮಾಲಿ’ ಎಂದು ಹೆಸರಿಡಲಾದ ಚಿತ್ರದಲ್ಲಿ ಒಂದಾಗಲಿದ್ದಾರೆ. ರೋಮ್ಯಾಂಟಿಕ್ ಕಥಾವಸ್ತುವುಳ್ಳ ಈ ಚಿತ್ರದ ನಾಯಕನ್ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏನೇ ಇದ್ದರೂ ಕಂಗನಾ ಮಾತ್ರ ಚಿತ್ರದ ಹಿರೋಯಿನ್ ಆಗಿ ನಟಿಸುವುದು ಈಗ ಶೇ.100ರಷ್ಟು ಕನ್‌ಫರ್ಮ್ ಆಗಿದೆ.

ಆದರೆ ಈ ಚಿತ್ರದ ಬಗ್ಗೆ ಯಾವುದೇ ವಿವರಗಳನ್ನು ಬಿಟ್ಟುಕೊಡಲು ಕಂಗನಾ ಅಥವಾ ಅನುರಾಗ್ ಕಶ್ಯಪ್ ಸಿದ್ಧರಿಲ್ಲ. ಆದರೆ ಇಮಾಲಿ, ಈ ವರ್ಷದ ಕೊನೆಗೆ ಚಿತ್ರೀಕರಣ ಆರಂಭಿಸಲಿರುವ ಬಗ್ಗೆ ಕಂಗನಾ ಸುಳಿವು ನೀಡಿದ್ದಾರೆ. ಅನುರಾಗ್ ಕಶ್ಯಪ್ ಚಿತ್ರರಂಗದಲ್ಲಿ ತನಗೆ ‘ಗಾಡ್‌ಫಾದರ್’ ಆಗಿದ್ದು, ಇಂದು ನಾನು ಏನಾದರೂ ಆಗಿದ್ದರೆ, ಅದಕ್ಕೆ ಅವರೇ ಕಾರಣರು ಎಂದು ಬಾಲಿವುಡ್‌ನ ಈ ಜನಪ್ರಿಯ ನಟಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.

ಬರೋಬ್ಬರಿ 12 ವರ್ಷಗಳ ಹಿಂದೆ ಅನುರಾಗ್ ಕಶ್ಯಪ್, ತನ್ನ ರೋಮ್ಯಾಂಟಿಕ್-ಡ್ರಾಮಾ ಕಥಾವಸ್ತುವಿನ ಚಿತ್ರ ಗ್ಯಾಂಗ್‌ಸ್ಟರ್ ಮೂಲಕ ಕಂಗನಾಳನ್ನು ಬಾಲಿವುಡ್‌ಗೆ ಪರಿಚಯಿಸಿದ್ದರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಕಂಗನಾಗೆ, ಹಲವಾರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಶ್ರೇಷ್ಠ ನವನಟಿ ಪುರಸ್ಕಾರಗಳು ಲಭಿಸಿದ್ದವು.

ಆದಾಗ್ಯೂ, ಹೃತಿಕ್ ಅಭಿನಯದ ಕೈಟ್ಸ್ ಚಿತ್ರದ ಸೆಟ್‌ನಲ್ಲಿ ಕಂಗನಾ ಹಾಗೂ ಅನುರಾಗ್ ನಡುವೆ ತೀವ್ರ ವಿರಸವುಂಟಾಗಿತ್ತು. ಕೈಟ್ಸ್‌ನ ನಿರ್ದೇಶಕರಾಗಿದ್ದ ಅನುರಾಗ್, ಇನ್ನೋರ್ವ ನಟಿ ಬಾರ್ಬರಾ ಮೋರಿಗೆ ಚಿತ್ರದಲ್ಲಿ ಹೆಚ್ಚು ಪ್ರಾಶಸ್ತ್ತ್ಯವನ್ನು ನೀಡಿದ್ದರು ಎಂದು ಕಂಗನಾ ಬಹಿರಂಗವಾಗಿ ದೂರಿದ್ದರು.ಅದರೆ ಆನಂತರ ಮತ್ತೆ ಇವರಿಬ್ಬರು ಮತ್ತೆ ರಾಜಿಯಾದ ಬಳಿಕ ಅನುರಾಗ್ ಕಶ್ಯಪ್ ಅವರು ಸಂದರ್ಶನವೊಂದರಲ್ಲಿ, ಚಿತ್ರರಂಗಕ್ಕೆ ಕಂಗನಾರಂತಹ ಪ್ರತಿಭಾವಂತ ನಟಿಯನ್ನು ಪರಿಚಯಿಸಿರುವುದಕ್ಕೆ ತನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಇಮಾಲಿ ಚಿತ್ರದ ಮೂಲಕ ಕಂಗನಾ ಅನುರಾಗ್ ಕಶ್ಯಪ್ ಒಟ್ಟಾಗುತ್ತಿರುವುದು ಬಾಲಿವುಡ್‌ನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಪ್ರಸ್ತುತ ಕಂಗನಾ ಏಕ್ತಾ ಕಪೂರ್ ನಿರ್ಮಾಣದ ಮೆಂಟಲ್ ಹೈ ಕ್ಯಾ ಚಿತ್ರದಲ್ಲಿ ನಟಿಸುತ್ತಿ ದ್ದಾರೆ. ರಾಜ್‌ಕುಮಾರ್ ರಾವ್ ಚಿತ್ರದ ನಾಯಕ. ಕಂಗನಾ ಮಣಿಕರ್ಣಿಕಾ ಎಂಬ ಬಿಗ್‌ಬಜೆಟ್ ಚಿತ್ರದಲ್ಲಿಯೂ ನಟಿಸುತ್ತಿದ್ದು, ಆದರಲ್ಲಿ ಆಕೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X