ಹಾಸನ: ಹಾಡಹಗಲೇ ನಡುರಸ್ತೆಯಲ್ಲಿ ಯುವಕನ ಕೊಚ್ಚಿ ಕೊಲೆ

ಹಾಸನ,ಜೂ.23: ಹಾಡಹಗಲೇ ಯುವಕನೋರ್ವನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈದ ಘಟನೆ ನಗರದ ದಾಸರಕೊಪ್ಪಲಿನಲ್ಲಿ ಶನಿವಾರ ಸಂಜೆ ನಡೆದಿದೆ.
ಸಂತೋಷ್ ಅಲಿಯಾಸ್ ಡುಮ್ಮ ಸಂತು ಎಂಬವನೇ ಕೊಲೆಯಾದ ಯುವಕ. ಈತ ಮೊದಲು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಎನ್ನಲಾಗಿದೆ, ದುಷ್ಕರ್ಮಿಗಳು ಆತನನ್ನು ಕತ್ತಿ ಹಾಗೂ ಇತರ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ, ಕೊನೆಗೆ ರಸ್ತೆ ಮಧ್ಯೆ ಕೊಚ್ಚಿ ಕೊಲೆಗೈಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಸ್ಥಳಕ್ಕಾಗಮಿಸಿದ ಬಡಾವಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
Next Story





