ಕೆಎಸ್ಸಾರ್ಟಿಸಿಗೆ ನಾಲ್ಕು ಪ್ರಶಸ್ತಿ

ಬೆಂಗಳೂರು, ಜೂ.23: ಕಾನ್ಸಿಟ್ಯೂಷನ್ ಕ್ಲಬ್‌ನಿಂದ ನೀಡುವ 2018ನೆ ಸಾಲಿನ ಪ್ರತಿಷ್ಠಿತ ‘ಸ್ಟೇಟ್ ಗೌರ್ನೇನ್ಸ್ ಆರ್ಡರ್ ಆಫ್ ಮೆರಿಟ್’ನ ನಾಲ್ಕು ಪ್ರಶಸ್ತಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ತನ್ನದಾಗಿಸಿಕೊಂಡಿದೆ.
ಜೂ.22ರಂದು ಹೊಸದಿಲ್ಲಿಯಲ್ಲಿ ನಡೆದ 52ನೆ ರಾಷ್ಟ್ರೀಯ ಶೃಂಗ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯ ಸ್ಥಳದಲ್ಲಿ ಅನುಷ್ಠಾನಗೊಳಿಸಿರುವ ಆರೋಗ್ಯಕರ ಉಪಕ್ರಮಗಳು, ಅವತಾರ್, ಸಾರಿಗೆ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನಗಳ ಅನುಷ್ಠಾನ, ವೆಹಿಕಲ್ ಟ್ರಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ ವಿಭಾಗಗಳಲ್ಲಿನ ಉತ್ತಮ ಸೇವೆಗಳ ಅನುಷ್ಠಾನಕ್ಕೆ ಪ್ರಶಸ್ತಿಗಳು ದೊರೆತಿವೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
Next Story





