ದ.ಕ. ಜಿಲ್ಲೆಯ ಮದ್ರಸಗಳ ಗಮನಕ್ಕೆ
ಮಂಗಳೂರು, ಜೂ.23: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರ ಪ್ರಕಾರ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ದ.ಕ.ಜಿಲ್ಲೆಯ ಶೈಕ್ಷಣಿಕ ವರ್ಷದಿಂದಲೇ ಎಲ್ಲಾ ವಕ್ಫ್ ಸಂಸ್ಥೆಯ ಮದ್ರಸಗಳಲ್ಲಿ ಕಡ್ಡಾಯವಾಗಿ ರಕ್ಷಣಾ ನೀತಿಯನ್ನು ರೂಪಿಸಿ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ(1098)ಯನ್ನು ಸಂಸ್ಥೆಗಳಲ್ಲಿ ನಮೂದಿಸಲು, ದೂರು ಪೆಟ್ಟಿಗೆಯನ್ನು ಕಡ್ಡಾಯವಾಗಿ ತೆರೆದು ಜಿಲ್ಲಾ ವಕ್ಫ್ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





