ಸಚಿವ ಡಿ.ಕೆ.ಶಿ ವಿರುದ್ಧ ಆಧಾರ ರಹಿತ ವರದಿ ಬಿತ್ತರಿಸದಂತೆ ತಡೆಯಾಜ್ಞೆ

ಬೆಂಗಳೂರು, ಜೂ. 24: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಯಾವುದೇ ರೀತಿಯ ಸತ್ಯಾಂಶದಿಂದ ಕೂಡಿರದ, ಊಹಾತ್ಮಕ, ಆಧಾರರಹಿತ, ಕಪೋಲಕಲ್ಪಿತ, ಮಾನನಷ್ಟ ಆಗುವಂತಹ ವರದಿ ಅಥವಾ ಕಾರ್ಯಕ್ರಮಗಳನ್ನು ಬಿತ್ತರಿಸಕೂಡದು ಎಂದು ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಖಾಸಗಿ ಸುದ್ದಿ ವಾಹಿನಿಗಳು ನಡೆಸುತ್ತಿರುವ ಅಸೋಸಿಯೆಟೆಡ್ ಬ್ರಾಡ್ ಕ್ಯಾಸ್ಟಿಂಗ್ ಸಂಸ್ಥೆ ಸೇರಿದಂತೆ 25 ಸುದ್ದಿವಾಹಿನಿಗಳು ಹಾಗೂ ಪತ್ರಿಕೆಗಳ ಸಂಪಾದಕರಿಗೆ ಈ ಕುರಿತು ನೋಟಿಸ್ ಜಾರಿ ಮಾಡಲು ಆದೇಶಿಸಿರುವ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜುಲೈ 2ಕ್ಕೆ ನಿಗದಿಪಡಿಸಿ ಆದೇಶಿಸಿದೆ ಎಂದು ಗೊತ್ತಾಗಿದೆ.
Next Story





