ಮೈಸೂರು: ನಿಂದನೆಗೆ ಬೇಸತ್ತು ಕಲ್ಯಾಣ ಮಂಟಪದ ಮ್ಯಾನೇಜರ್ ಆತ್ಮಹತ್ಯೆ
ಮೈಸೂರು,ಜೂ.24: ಇಬ್ಬರಿಗೆ ಒಂದೇ ದಿನ ಕಲ್ಯಾಣಮಂಟಪ ನೀಡಿದ್ದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮ್ಯಾನೇಜರ್ ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ದೊಡ್ಡಮ್ಮ ತಾಯಿ ಕಲ್ಯಾಣ ಮಂಟಪದ ಮ್ಯಾನೇಜರ್ ಲಿಂಗರಾಜು. ಉರುಫ್ ರಾಜಣ್ಣ (43) ಆತ್ಮಹತ್ಯೆಗೆ ಶರಣಾದವರು.
ಎರಡು ಕುಟುಂಬದವರಿಗೆ ಒಂದೇ ದಿನ ಕಲ್ಯಾಣ ಮಂಟಪ ನೀಡಿದ್ದರಿಂದ ಜಗಳ ನಡೆದು ನಿಂದಿಸಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ಬೇಸರಗೊಂಡ ಮ್ಯಾನೇಜರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಎನ್.ಆರ್.ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story