ಬೆಂಗಳೂರು: ಮಾರಕಾಸ್ತ್ರ ಹಿಡಿದು ದಾಂಧಲೆ; ಓರ್ವ ವಶಕ್ಕೆ
ಬೆಂಗಳೂರು, ಜೂ.25: ಮದ್ಯದ ಅಮಲಿನಲ್ಲಿ ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸಿದ ಆರೋಪದ ಮೇಲೆ ಇಲ್ಲಿನ ನೆಲಮಂಗಲ ಗ್ರಾಮಾಂತರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ನೆಲಮಂಗಲದ ಚಿಕ್ಕಮಾರನಹಳ್ಳಿಯಲ್ಲಿ ರವಿವಾರ ರಾತ್ರಿ ಮದ್ಯದ ಅಮಲಿನಲ್ಲಿ ಸುರೇಶ್ ಹಾಗೂ ಲಕ್ಷ್ಮೀನಾರಾಯಣ್ ಎಂಬವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದ್ದು, ಸ್ಥಳೀಯರು ಬುದ್ಧಿ ಹೇಳಿದ ನಂತರ, ಸುರೇಶ್ ಮನೆಗೆ ಹೋಗಿದ್ದಾನೆ. ಆತನನ್ನು ಹಿಂಬಾಲಿಸಿದ ಲಕ್ಷ್ಮೀನಾರಾಯಣ್ ಮಾರಕಾಸ್ತ್ರ ಹಿಡಿದು ಸುರೇಶ್‌ನ ಮನೆ ಬಾಗಿಲು ಮುರಿದಿದ್ದಾನೆ ಎನ್ನಲಾಗಿದೆ.
ಈ ವೇಳೆ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ್ ರಂಪಾಟಕ್ಕೆ, ಗ್ರಾಮಸ್ಥರು ಕೆಲಕಾಲ ಭಯಭೀತರಾಗಿದ್ದರು. ಬಳಿಕ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು, ದಾಂಧಲೆ ಮಾಡಿದ ಲಕ್ಷ್ಮೀ ನಾರಾಯಣ್‌ನನ್ನು ವಶಕ್ಕೆ ಪಡೆದಿದ್ದಾರೆ.
Next Story





