ಮಳೆಯಿಂದ ಮನೆ ಕುಸಿತ: ಉದ್ಯಮಿಯಿಂದ ಧನ ಸಹಾಯ

ಪುತ್ತೂರು,ಜೂ.25: ಇತ್ತೀಚೆಗೆ ಸುರಿದ ಬಾರೀ ಮಳೆಯಿಂದಾಗಿ ಪುತ್ತೂರು ಕಸ್ಬಾ ಗ್ರಾಮದ ಆನಂದಾಶ್ರಮ ಬಳಿಯ ಸಿಂಹವನ ಎಂಬಲ್ಲಿನ ನಿವಾಸಿ ಕಮಲ ಎಂಬವರ ಮನೆ ಕುಸಿದು ಬಿದ್ದು ಹಾನಿಯಾಗಿದ್ದು, ಇಲ್ಲಿಗೆ ಭೇಟಿ ನೀಡಿ ಈ ಕುಟುಂಬದ ಸ್ಥಿತಿಯನ್ನು ಗಮನಿಸಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಈ ಮನೆಯನ್ನು ದುರಸ್ತಿಗೊಳಿಸಿ ಸೋಮವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ , ಶಶಿಧರ್ ನಾಯ್ಕ ಕೆಮ್ಮಾಯಿ, ದೇವರಾಜ ಸಿಂಹವನ, ಕಬೀರ ಕರ್ವೇಲು, ಮಣ ಸಿಂಹವನ, ಮೋಹನ ಸಿಂಹವನ ಮತ್ತಿತರು ಉಪಸ್ಥಿತರಿದ್ದರು.
Next Story





