ಮೈಸೂರು: ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ಮೌಲ್ಯದ ಪದಾರ್ಥಗಳು ಭಸ್ಮ
ಮೈಸೂರು,ಜೂ.25: ವಿನಾಯಕ ಹೋಮ್ ಅಪ್ಲೈಯನ್ಸ್ ಮತ್ತು ಕಿರಾಣಿ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂ.ಮೌಲ್ಯದ ಪದಾರ್ಥಗಳು ಸುಟ್ಟು ಭಸ್ಮವಾದ ಘಟನೆ ಹೆಬ್ಬಾಳ್ ನ ಮಾದೇಗೌಡ ವೃತ್ತ ದಲ್ಲಿ ನಡೆದಿದೆ.
ಹೆಬ್ಬಾಳ ಮಾದೇಗೌಡ ವೃತ್ತದಲ್ಲಿರುವ ವಿನಾಯಕ್ ಹೋಮ್ ಅಪ್ಲೈಯನ್ಸ್ ಮತ್ತು ಕಿರಾಣಿ ಅಂಗಡಿಯಲ್ಲಿ ಇದ್ದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ.ಮೌಲ್ಯದ ಪದಾರ್ಥಗಳು ಸುಟ್ಟು ಭಸ್ಮವಾಗಿವೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರವಿ ಎಂಬವರಿಗೆ ಸೇರಿದ ಅಂಗಡಿ ಇದು ಎನ್ನಲಾಗುತ್ತಿದ್ದು, ನಾಲ್ಕು ಲಕ್ಷ ರೂ.ಮೌಲ್ಯದ ಪದಾರ್ಥಗಳು ಸುಟ್ಟು ಭಸ್ಮವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





