ನಾವುಂದ: ಕೋಯಗರ ಮದ್ರಸ ಪ್ರಾರಂಭೋತ್ಸವ

ಕುಂದಾಪುರ, ಜೂ.25: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡು ಆಫ್ ಇಂಡಿಯಾ ಇದರ ಅಂಗಿಕಾರದೊಂದಿಗೆ ಕಾರ್ಯಾಚರಿಸುತ್ತಿರುವ ನಾವುಂದ ಕೋಯನಗರ ಬುಸ್ತಾನುಲ್ ಉಲೂಂ ಮದ್ರಸದ ಪ್ರಾರಂಭೋತ್ಸವ ‘ಫತ್ ಹೇ ಮುಬಾರಕ್’ ಕಾರ್ಯಕ್ರಮವು ರವಿವಾರ ಜರಗಿತು.
ಮಗರಿಬ್ ನಮಾಝಿನ ಬಳಿಕ ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಯನಗರ ಮೊಹಲ್ಲಾ ಕಮಿಟಿಯ ನಿಕಟಪೂರ್ವ ಅಧ್ಯಕ್ಷ ಅಬ್ಬಾಸ್ ಹಾಜಿ ವಹಿಸಿದ್ದರು. ಸ್ಥಳೀಯ ಮುಖ್ಯೋಪಾಧ್ಯಾಯ ಕೊಂಬಾಳಿ ಕೆ.ಎಂ.ಎಚ್.ಝುಹುರಿ ಉದ್ಘಾಟಿಸಿದರು.
ಬದ್‌ರುಲ್ ಹುದಾ ವೆಲ್ಫೇರ್ ಸಂಘದ ಪ್ರತಿನಿಧಿ ಇಕ್ಬ್ಬಾಲ್ ದಾರಿಮಿ ಶುಭ ಹಾರೈಸಿದರು. ಮುಹಮ್ಮದ್ ಹಾಜಿ, ಯೂಸುಫ್ ಹಾಜಿ, ಮೊಹಲ್ಲಾ ಸಮಿತಿ ಸದಸ್ಯ ಹಮೀದ್ ಮುಸ್ಲಿಯಾರ್, ಬದ್‌ರುಲ್ ವೆಲ್ಫೇರ್ ಸಮಿತಿ ಅಧ್ಯಕ್ಷ ಮುಲ್ಲಾ ಸಮೀರ್, ಹಂಝ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಹಲ್ಲಾ ಕಮಿಟಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಕೆ.ಎಂ.ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು.
Next Story





