ಜುಗಾರಿ ಅಡ್ಡೆಗೆ ದಾಳಿ : 13 ಮಂದಿಯ ಬಂಧನ
ಕಾರ್ಕಳ, ಜೂ.25: ಕಾಬೆಟ್ಟು ಕಟ್ಟೆಮಾರು ಎಂಬಲ್ಲಿ ಜೂ.25ರಂದು ಅಪರಾಹ್ನ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕುಕ್ಕುಂದೂರಿನ ದಿನೇಶ ಶೆಟ್ಟಿ(36), ಅಲ್ತಾಫ್(32), ನಿಟ್ಟೆಯ ಕುಟ್ಟಿ ಶೆಟ್ಟಿ(58), ಹಿರ್ಗನದ ಪ್ರದೀಪ್ ಪೂಜಾರಿ (26) ಎಂಬವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ, 3600ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಚಾರ ಗ್ರಾಮದ ಕಾರಾಡಿ ಎಂಬಲ್ಲಿರುವ ರಬ್ಬರ ಪ್ಲಾಂಟೇಷನ್ ಶೆಡ್ ಬಳಿ ಜೂ.24ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕೀರ್ತನ ಮಡಿವಾಳ, ಪ್ರತಾಪ ಶೆಟ್ಟಿ, ರಾಜು, ಉಮೇಶ ಶೆಟ್ಟಿ, ಸಂತೋಷ, ದತ್ತಾತ್ರೇಯ ನಾಯಕ್, ಮಂಜುನಾಥ, ಸೈಯ್ಯದ್ ಅನ್ವರ್, ರಫೀಕ್ ಎಂಬವರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿ, 42,730 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





