ಮುಲ್ಲರಪಟ್ನ ಸೇತುವೆ ಕುಸಿತ
ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಬಂಟ್ವಾಳ ಮತ್ತು ಮಂಗಳೂರು ಸಂಪರ್ಕದ ಮುಲ್ಲರಪಟ್ನದ ಫಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಸೋಮವಾರ ಸಂಜೆ ಕುಸಿದಿದೆ. ಸೋಮವಾರ ಸಂಜೆ ಸುಮಾರು 6:15ರ ಸುಮಾರಿಗೆ ಸೇತುವೆಯ ಎರಡು ಸ್ಲಾಬ್‌ಗಳು ಕುಸಿದಿದ್ದು, ಒಂದು ಪಿಲ್ಲರ್‌ಗೂ ಹಾನಿಯಾಗಿದೆ. ಪಿಲ್ಲರ್‌ಗಳು ಶಿಥಿಲಗೊಂಡದ್ದೇ ಕುಸಿತಕ್ಕೆ ಕಾರಣ ಎಂದು ಪಿಡಬ್ಲುಡಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





