ಕುಂದಾಪುರ: ಆಸ್ಪತ್ರೆಯಿಂದ ಒಳರೋಗಿ ಪರಾರಿ
ಕುಂದಾಪುರ, ಜೂ.25: ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಭಟ್ಕಳ ಕೋಣಾರ ನೇಲಗಿರಿ ನಿವಾಸಿ ಜೋಗಿ ಎಂಬ ವರ ಮಗ ರಮೇಶ(32) ಎಂಬವರು ಜೂ.24ರಂದು ಬೆಳಗಿನ ಜಾವ ಪರಾರಿಯಾಗಿ ನಾಪತ್ತೆಯಾಗಿದ್ದಾರೆ.
ಜೂ.21ರಂದು ಬೆಳಗಿನ ಜಾವ ಮೂತ್ರ ಮಾಡಲು ಮನೆಯಿಂದ ಹೊರಗೆ ಹೋದ ರಮೇಶ್ ಆಯತಪ್ಪಿಬಿದ್ದು ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಕೋಣೆಗೆ ನರ್ಸ್ ಬರುವಾಗ ಆಸ್ಪತ್ರೆಯ ಹಿಂಬದಿ ಕಿಟಿಕಿಯಿಂದ ಜಾಲರಿಯನ್ನು ದೂಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





