ಮಂಗಳೂರು : ತಾಯಿಯನ್ನು ವಂಚಿಸಿ ಕಾರು ಮಾರಿದ ಮಗ!

ಸಾಂದರ್ಭಿಕ ಚಿತ್ರ
ಮಂಗಳೂರು, ಜೂ.26: ಸುಳ್ಳು ದಾಖಲೆ ಸೃಷ್ಟಿಸಿ ತನ್ನ ತಾಯಿಯ ಕಾರನ್ನೇ ಮಗ ಮಾರಾಟ ಮಾಡಿದ ಘಟನೆ ನಗರದ ಪಳ್ನೀರ್ ನಲ್ಲಿ ನಡೆದಿದೆ. ಕಾರು ಮಾರಿದ ವ್ಯಕ್ತಿಯನ್ನು ನಗರದ ಪಳ್ನೀರ್ ನಿವಾಸಿ ಮನೀಷ್ ಎಂದು ಗುರುತಿಸಲಾಗಿದೆ.
ಪಳ್ನೀರ್ ವಿಠಲ್ಜಿ ಲೇನ್ ನ ರಾಜ್ ವಿಲ್ಲಾ ನಿವಾಸಿ ಮನೀಷ್ ಕಾರನ್ನು ಮಾರಾಟ ಮಾಡುವುದಾಗಿ ತಾಯಿಯಲ್ಲಿ ಹೇಳಿದ್ದ. ಆದರೆ ಕಾರನ್ನು ಮಾರಲು ತಾಯಿ ನಿರಾಕರಿಸಿದ್ದರು. ಕೆಲವು ತಿಂಗಳ ಬಳಿಕ ಕಾರಿನ ನಕಲು ದಾಖಲೆಗಳನ್ನು ಸೃಷ್ಟಿಸಿದ್ದ ಮನೀಷ್, ಕಾಂಪೌಂಡ್ನಲ್ಲಿದ್ದ ಕಾರನ್ನು ಮಡಿಕೇರಿ ತಾಲೂಕಿನ ಸುಂಟಿಕೊಪ್ಪದಲ್ಲಿನ ಮಹಿಳೆಯೋರ್ವಳಿಗೆ ಮಾರಿದ್ದನು ಎಂದು ಆರೋಪಿಸಲಾಗಿದೆ.
ವಿಷಯ ತಿಳಿದ ಬಳಿಕ ತಾಯಿಯು ಮಗನ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Next Story