ದೈವಸ್ಥಾನಕ್ಕೆ ದಾರಿ ಕೇಳುವ ನೆಪದಲ್ಲಿ ಸರಗಳವು

ಮಂಗಳೂರು, ಜೂ.26: ದೈವಸ್ಥಾನಕ್ಕೆ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರವನ್ನು ಬೈಕ್‌ನಲ್ಲಿದ್ದ ಇಬ್ಬರು ಕಳ್ಳರು ಕಳವುಗೈದು ಪರಾರಿಯಾಗಿರುವ ಘಟನೆ ಇಲ್ಲಿನ ಮೇರಿಹಿಲ್ ಸಮೀಪದ ಎಂ.ಆರ್ ಸ್ಟೋರ್ ಬಳಿ ಮಂಗಳವಾರ ನಡೆದಿದೆ.
ಮಣಿಹಳ್ಳದ ಮೂಡುನಾಡುವಿನ ನಿವಾಸಿ ಉಷಾ ಎಂಬವರ ಚಿನ್ನದ ಸರವನ್ನು ಕಳವುಗೈಯಲಾಗಿದೆ. ಕಳವುಗೈದ ಚಿನ್ನದ ಸರದ ವೌಲ್ಯ 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಮೇರಿಹಿಲ್ ಬಾಂದೊಟ್ಟುವಿನ ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಅಡುಗೆ ಕೆಲಸದಲ್ಲಿರುವ ಉಷಾ ಬೆಳಗ್ಗೆ ಎಂ.ಆರ್ ಸ್ಟೋರ್‌ನ ಸಮೀಪಿಸಿದ ವೇಳೆ ಬೈಕ್‌ನಲ್ಲಿದ್ದ ಯುವಕರಿಬ್ಬರು ದೈವಸ್ಥಾನಕ್ಕೆ ದಾರಿ ಕೇಳಿದ್ದಾರೆ. ಮಹಿಳೆ ದಾರಿ ತೋರಿಸುತ್ತಿದ್ದಂತೆಯೇ ಬೈಕ್‌ನಲ್ಲಿದ್ದ ಹಿಂಬದಿ ಸವಾರ ಕೊರಳಲ್ಲಿದ್ದ ಚಿನ್ನದ ಸರವನ್ನು ತುಂಡರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





